Publish Date: Fri, 02 Aug 2024 (20:31 IST)
Updated Date: Fri, 02 Aug 2024 (20:36 IST)
ಚಿತ್ರದುರ್ಗಾ: ಆ್ಯಕ್ಷನ್ ಧ್ರುವ ಸರ್ಜಾ ಅವರು ನೋಡಿದ ಅಭಿಮಾಯೊಬ್ಬಳು ಬಿಕ್ಕಿ ಬಿಕ್ಕಿ ಅತ್ತು, ನಟನ ಕಾಲಿಗೆ ಬಿದ್ದಿರುವ ಘಟನೆ ಇಂದು ನಡೆದಿದೆ.
ಧ್ರುವ ಅವರು ಇಂದು ಚಿತ್ರದುರ್ಗಾದ ಮುರುಘಾಶ್ರೀ ಮಠಕ್ಕೆ ಭೇಟಿ ನೀಡಿದ್ದಾರೆ. ಸ್ವಾಮೀಜಿ ಭೇಟಿ ವೇಳೆ ಅಲ್ಲೇ ಇದ್ದ ಅಭಿಮಾನಿಯೊಬ್ಬಳು ಧ್ರುವ ಅವರನ್ನು ನೋಡುತ್ತಿದ್ದ ಹಾಗೇ ಕಣ್ಣೀರು ಹಾಕಲು ಶುರು ಮಾಡಿದ್ದಾಳೆ. ಇದನ್ನು ನೋಡಿದ ಧ್ರುವ ಅವರು ಸ್ವಾಮೀಜಿಗಳ ಆಶೀರ್ವಾದ ಪಡೆದು ಅಭಿಮಾನಿ ಜತೆ ಮಾತನಾಡಿದ್ದಾಳೆ. ಬಿಕ್ಕಿ ಬಿಕ್ಕಿ ಅಳುತ್ತಿರುವ ಅಭಿಮಾನಿಯನ್ನು ಸಮಾಧಾನ ಮಾಡಿದ ಧ್ರುವ ನಂತರ ಸೆಲ್ಫಿ ನೀಡಿದ್ದಾರೆ.
ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಮಾರ್ಟಿನ್ ಸಿನಿಮಾದ ಟ್ರೇಲರ್ ಇದೇ 5ರಂದು ಮುಂಬೈನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಕನ್ನಡ ಸೇರಿದಂತೆ ಅರೆಬಿಕ್, ಕೊರಿಯನ್, ಬಂಗಾಲಿ ಸೇರಿ 13 ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆಗೊಳ್ಳಲಿದೆ. ಈ ಸಿನಿಮಾಗೆ ಉದಯ್ ಮೆಹ್ತಾ ಅವರು ಬಂಡವಾಳ ಹೂಡಿದ್ದು, ಎಪಿ ಅರ್ಜುನ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ, ಸತ್ಯ ಹೆಗಡೆ ಛಾಯಾಚಿತ್ರಗ್ರಹಣವಿದೆ. ವೈಭವಿ ಶಾಂಡಿಲ್ಯ ಚಿತ್ರದ ನಾಯಕಿ.