Select Your Language

Notifications

webdunia
webdunia
webdunia
webdunia

ದರ್ಶನ್ ಗಾಗಿ ಪವರ್ ಫುಲ್ ಸ್ಥಳಕ್ಕೆ ಭೇಟಿ ಕೊಟ್ಟ ಮದರ್ ಇಂಡಿಯಾ ಸುಮಲತಾ

Sumalatha Ambareesh

Krishnaveni K

ಬೆಂಗಳೂರು , ಶುಕ್ರವಾರ, 2 ಆಗಸ್ಟ್ 2024 (14:34 IST)
ಬೆಂಗಳೂರು: ದೊಡ್ಮಗ ದರ್ಶನ್ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದರೆ ಇತ್ತ ಮದರ್ ಇಂಡಿಯಾ ಸುಮಲತಾ ಈಗ ಪವರ್ ಫುಲ್ ಜಾಗಕ್ಕೆ ಭೇಟಿ ನೀಡಿ ಮಗನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿ ಎರಡು ತಿಂಗಳಾಗುತ್ತಾ ಬಂದಿದೆ. ನಿನ್ನೆಯಷ್ಟೇ ಕೋರ್ಟ್ ದರ್ಶನ್ ಗೆ ಆಗಸ್ಟ್ 14 ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ನೀಡಿತ್ತು. ಈ ನಡುವೆ ಇಂದು ಸುಮಲತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಶೇಷ ಸ್ಥಳಕ್ಕೆ ಭೇಟಿ ನೀಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ದರ್ಶನ್ ಬಂಧನವಾದಾಗಿನಿಂದಲೂ ಸುಮಲತಾ ಸೋಷಿಯಲ್ ಮೀಡಿಯಾಗಳಿಂದ, ಮಾಧ್ಯಮಗಳಿಂದ ದೂರವೇ ಇದ್ದಾರೆ. ಒಮ್ಮೆ ಮಾತ್ರ ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಯಾವತ್ತಿದ್ದರೂ ನನ್ನ ಮಗನೇ. ಅವನು ನಿರ್ದೋಷಿಯಾಗಿ ಹೊರಬರಲಿ ಎಂಬುದೇ ನನ್ನ ಆಸೆ ಎಂದಿದ್ದರು.

ಇದೀಗ ದರ್ಶನ್ ಗೆ ನ್ಯಾಯಾಂಗ ಬಂಧನ ವಿಸ್ತರಣೆಯಾಗುತ್ತಿದ್ದಂತೇ ಇತ್ತ ಸುಮಲತಾ ಶಿರಡಿ ಸಾಯಿಬಾಬ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಸಾಯಿ ಬಾಬ ಮಂದಿರಕ್ಕೆ ಹೋಗಿರುವ ಫೋಟೋಗಳನ್ನು ಹಂಚಿಕೊಂಡಿರುವ ಸುಮಲತಾ ಬಾಬನ ಆಶೀರ್ವಾದ ಯಾವತ್ತೂ ನಮ್ಮ ಮೇಲಿರಲಿ ಎಂದು ಬೇಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಆಂಡ್ ಗ್ಯಾಂಗ್ ರೇಣುಕಾಸ್ವಾಮಿ ಜೀವ ಮುಗಿಸಲು ಬಳಸಿದ್ದು ಜಸ್ಟ್ 699 ವಸ್ತು