Select Your Language

Notifications

webdunia
webdunia
webdunia
webdunia

ಧೀರನ್ ರಾಮ್ ಕುಮಾರ್ ಜೊತೆ ಹೊಸ ಸಿನಿಮಾ ಘೋಷಿಸಿದ ಜೇಮ್ಸ್ ನಿರ್ಮಾಪಕ

ಧೀರನ್ ರಾಮ್ ಕುಮಾರ್ ಜೊತೆ ಹೊಸ ಸಿನಿಮಾ ಘೋಷಿಸಿದ ಜೇಮ್ಸ್ ನಿರ್ಮಾಪಕ
ಬೆಂಗಳೂರು , ಶುಕ್ರವಾರ, 29 ಏಪ್ರಿಲ್ 2022 (11:21 IST)
ಬೆಂಗಳೂರು: ಡಾ.ರಾಜ್ ಕುಮಾರ್ ವಂಶದ ಮತ್ತೊಬ್ಬ ಕುಡಿ ಧೀರನ್ ರಾಮ್ ಕುಮಾರ್ ಗೆ ಇಂದು ಜನ್ಮದಿನದ ಸಂಭ್ರಮ. ಈ ದಿನ ಧೀರನ್ ಹೊಸ ಸಿನಿಮಾವೊಂದು ಘೋಷಣೆಯಾಗಿದೆ.

ಪುನೀತ್ ರಾಜ್ ಕುಮಾರ್ ಗೆ ಜೇಮ್ಸ್ ನಿರ್ಮಿಸಿದ್ದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಈಗ ಧೀರನ್ ಹೊಸ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ.

ಈ ಸಿನಿಮಾಗೆ ಇನ್ನೂ ಟೈಟಲ್ ಇಡಲಾಗಿಲ್ಲ. ಬಡವ ರಾಸ್ಕಲ್ ಸಿನಿಮಾ ನಿರ್ದೇಶಿಸಿದ್ದ ಶಂಕರ್ ಗುರು ಈ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಶಿವ 143 ಸಿನಿಮಾದಲ್ಲಿ ನಟಿಸುತ್ತಿರುವ ಧೀರನ್ ಗೆ ಇದು ಮತ್ತೊಂದು ಸಿನಿಮಾವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಶೆಟ್ಟಿ ಹರಿಕತೆ ಅಲ್ಲ ಗಿರಿಕತೆ ರಿಲೀಸ್ ಡೇಟ್ ಅನೌನ್ಸ್