ಬೆಂಗಳೂರು: ಸದಭಿರುಚಿಯ ಮತ್ತು ಕ್ರಿಯಾತ್ಮಕ ಸಿನಿಮಾಗಳ ಮೂಲಕ ಹೆಸರು ಮಾಡುತ್ತಿರುವ ರಿಷಬ್ ಶೆಟ್ಟಿ ಆಂಡ್ ಗ್ಯಾಂಗ್ ಮತ್ತೆ ನಿಮ್ಮ ಮುಂದೆ ಹೊಸ ಸಿನಿಮಾದೊಂದಿಗೆ ಬರಲಿದೆ.
ಲಾಕ್ ಡೌನ್ ಗಿಂತ ಮೊದಲು ಸೆಟ್ಟೇರಿದ್ದ ರಿಷಬ್ ಶೆಟ್ಟಿ ನಾಯಕರಾಗಿರುವ ಹರಿಕತೆ ಅಲ್ಲ, ಗಿರಿಕತೆ ಸಿನಿಮಾ ಈಗ ರಿಲೀಸ್ ಗೆ ಸಿದ್ಧವಾಗಿದೆ.
ಜೂನ್ 23 ರಿಂದ ಚಿತ್ರ ಥಿಯೇಟರ್ ನಲ್ಲಿ ತೆರೆಗೆ ಬರಲಿದೆ. ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ಎಂಬ ನವ ನಿರ್ದೇಶಕರು ನಿರ್ದೇಶಿಸಿದ ಎಂಟರ್ ಟೈನರ್ ಇದಾಗಿದೆ. ಪೋಸ್ಟರ್ ನಿಂದಲೇ ಈ ಸಿನಿಮಾ ಗಮನ ಸೆಳೆದಿತ್ತು.