ಬಾಲಿವುಡ್‌ನ ಖ್ಯಾತ ಜೋಡಿಗಳಲ್ಲಿ ಧರ್ಮೇಂದ್ರ ಹಾಗೂ ಹೇಮಾ ಮಾಲಿನಿ ಕೂಡಾ ಒಂದು. ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ, ಕೊನೆಗೆ ಪ್ರೀತಿಯಲ್ಲಿ ಬಿದ್ದಿತು. ಆದರೆ ದರ್ಮೇಂದ ಆಗಲೇ ಮದುವೆಯಾಗಿ ನಾಲ್ಕು ಮಕ್ಕಳಿತ್ತು.
ಆದರೆ ಹೇಮಾ ಮಾಲಿನಿ ಪೋಷಕರು ಧರ್ಮೇಂದ್ರ ಜತೆಗೆ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.
ನಟಿ ಪ್ರಕಾಶ್ ಕೌರ್ ಅವರನ್ನು ಈಗಾಗಲೇ ಮದುವೆಯಾಗಿದ್ದ ಧರ್ಮೇಂದ್ರಗೆ ಸನ್ನಿ ಡಿಯೋಲ್, ಬಾಬಿ ಡಿಯೋಲ್, ವಿಜೇತಾ ಮತ್ತು ಅಜೀತಾ ಎಂಬ ನಾಲ್ಕು ಮಕ್ಕಳಿದ್ದರು. ಆದರೆ, ಹೇಮಾ ಮಾತ್ರ ಧರ್ಮೇಂದ್ರನನ್ನು ಬಿಟ್ಟಿರಲು ಬಿಡ್ತಿರಲಿಲ್ಲ. ಹೀಗಾಗಿ ಅವಳನ್ನು ಮದುವೆಯಾಗಲು ನಿರ್ಧರಿಸಿದನು. ಹೇಮಾ ಪೋಷಕರಿಂದ ಸಾಕಷ್ಟು ವಿರೋಧವನ್ನು ಎದುರಿಸಿದರು.
ಧರ್ಮೇಂದ್ರ ಈಗಾಗಲೇ ಮದುವೆಯಾಗಿದ್ದರಿಂದ ಮೊದಲ ಪತ್ನಿ ವಿಚ್ಛೇಧನ ನೀಡಲು ನಿರಾಕರಿಸಿದರು. ಇದರಿಂದ ಧರ್ಮೇಂದ್ರ ಹಾಗೂ ಹೇಮಾ ಮಾಲಿನಿ ಮದುವೆಗಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವುದು ಏಕೈಕ ಆಯ್ಕೆಯಾಗಿತ್ತು.
ಹೇಮಾ ಮತ್ತು ಧರ್ಮೇಂದ್ರ ಇಸ್ಲಾಂಗೆ ಮತಾಂತರಗೊಂಡರು ಮತ್ತು 1979 ರಲ್ಲಿ ತಮ್ಮ ನಿಕಾಹ್‌ಗಾಗಿ ತಮ್ಮ ಹೆಸರನ್ನು ದಿಲಾವರ್ ಮತ್ತು ಆಯೇಶಾ ಬಿ ಎಂದು ಬದಲಾಯಿಸಿದರು ಎಂಬ ಸುದ್ದಿಯಿದೆ.