ಬೆಂಗಳೂರು: ಲವ್ ಯೂ ಮುದ್ದು ಸಿನಿಮಾ ವೀಕ್ಷಿಸಲು ಬಂದಿದ್ದ ಪ್ರೇಮ ಕಾವ್ಯ ಕನ್ನಡ ಧಾರವಾಹಿ ನಟಿ ವೈಷ್ಣವಿ ಎದೆ ಕಾಣುವಂತಹ ಬೋಲ್ಡ್ ಉಡುಪು ನೋಡಿ ನೆಟ್ಟಿಗರು ಛೀಮಾರಿ ಹಾಕಿದ್ದಾರೆ.
ಪ್ರೇಮ ಕಾವ್ಯ ಧಾರವಾಹಿಯಲ್ಲಿ ಸಹ ನಟಿಯಾಗಿರುವ ಪ್ರಿಯಾ ಪತಿ ಸಿದ್ದು ಮೂಲಿಮನಿ ನಾಯಕರಾಗಿರುವ ಲವ್ ಯೂ ಮುದ್ದು ಸೆಲೆಬ್ರಿಟಿ ಶೋನಲ್ಲಿ ವೈಷ್ಣವಿ ಪಾಲ್ಗೊಂಡಿದ್ದರು. ಈ ವೇಳೆ ಆಕೆ ಎದೆ ದರ್ಶನವಾಗುವಂತ ಬೋಲ್ಡ್ ಡ್ರೆಸ್ ಹಾಕಿದ್ದರು.
ಇದಕ್ಕೆ ನೆಟ್ಟಿಗರು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ. ಮೊದಲು ಸರಿಯಾದ ಡ್ರೆಸ್ ಹಾಕಮ್ಮ. ಕನ್ನಡದ ಸಿನಿಮಾ ಶೋಗೆ ಈ ರೀತಿ ಯಾರೂ ಬಂದಿಲ್ಲ. ಕನ್ನಡದ ಹೀರೋಯಿನ್ ಗಳೇ ಎಷ್ಟು ಡೀಸೆಂಟ್ ಆಗಿ ಬರ್ತಾರೆ. ಇವಳದ್ದು ಇದೇನು ಡ್ರೆಸ್ ಎಂದು ಕೆಲವರು ಟೀಕಿಸಿದ್ದಾರೆ.
ಮೈ ತುಂಬಾ ಬಟ್ಟೆ ಹಾಕಿಕೊಂಡರೇ ಹೆಣ್ಣು ಮಕ್ಕಳಿಗೆ ಶೋಭೆ. ಇಷ್ಟೊಂದು ಬಿಚ್ಚು ಬಟ್ಟೆ ಹಾಕಿಕೊಂಡು ಕನ್ನಡ ಸಿನಿಮಾ ಪ್ರೀಮಿಯರ್ ಗೆ ಬಂದಿರುವುದನ್ನು ನೋಡಿದರೇ ಅಚ್ಚರಿಯಾಗುತ್ತದೆ. ಸೀರಿಯಲ್ ನಲ್ಲಿ ನೋಡಿದ್ರೆ ಗೌರಮ್ಮನ ಥರಾ ಇರ್ತೀರಿ, ಇಲ್ಲಿ ಹಿಂಗಾ ಎಂದು ಟ್ರೋಲ್ ಮಾಡಿದ್ದಾರೆ.