ಬೆಂಗಳೂರು: ಬಿಗ್‌ಬಾಸ್ ಸೀಸನ್ 12ರಲ್ಲಿ ಆರಂಭದಲ್ಲಿ ಅಶ್ವಿನಿ ಗೌಡ ಹಾಗೂ ಜಾಹ್ನವಿಯಿಂದ ನೇರ ಟಾರ್ಗೆಟ್ ಆಗಿದ್ದ ರಕ್ಷಿತಾ ಇದೀಗ ಧ್ರುವಂತ್ ಕೆಂಗಣ್ಣಿಗೆ ಸಿಲುಕಿದ್ದಾರೆ.
ಆರಂಭದಲ್ಲಿ ರಕ್ಷಿತಾ ಶೆಟ್ಟಿ ಜತೆ ಉತ್ತಮ ಸಂಬಂಧ ಹೊಂದಿದ್ದ ಧ್ರುವಂತ್ ಈಚೆಗೆ ಆಕೆ ನಾಟಕವಾಡುತ್ತಿದ್ದಾಳೆ ಎಂಬ ಆರೋಪ ಮಾಡಿದ್ದಾರೆ.
ಇನ್ನೂ ನಿನ್ನೆ ನಡೆದ ಮೆಣಸು ತಿಂದು ವಿಷಕಾರಿ ಎಂದು ಹೇಳುವ ಪ್ರಕ್ರಿಯೆಯಲ್ಲಿ ಧ್ರುವಂತ್ ಅವರು, ರಕ್ಷಿತಾಳ ನಡೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ನಾನು ಮಂಗಳೂರಿನವನಾಗಿದ್ದು, ಯಾರೂ ಕೂಡಾ ರಕ್ಷಿತಾಳ ಹಾಗೇ ಮಾತನಾಡುವುದಿಲ್ಲ.
ಜಗಳವಾಡುವಾಗ ಸ್ಪಷ್ಟ ಕನ್ನಡ ಮಾತನಾಡುವ ರಕ್ಷಿತಾಗೆ ಶನಿವಾರ ಹಾಗೂ ಭಾನುವಾರ ಮಾತ್ರ ಮಾತು ಸರಿಯಾಗಿ ಆಡಕ್ಕೆ ಬರಲ್ಲ ಎಂದು ಮಾಳು ಮಾತಿಗೆ ಪ್ರತಿಕ್ರಿಯಿಸುತ್ತಾರೆ.
ಈ ವಿಚಾರವನ್ನೇ ಮುಂದಿಟ್ಟು ಧ್ರುವಂತ್‌ಗೆ ಕಾಯಿಮೆಣಸು ಕೊಟ್ಟ ಸೂರಜ್ ಅವರು, ರಕ್ಷಿತಾಳ ಭಾಷೆ ಬಗ್ಗೆ ಮಾತನಾಡುವ ಹಕ್ಕು ನಿಮಗಿಲ್ಲ. ಆ ಭಾಷೆಯಿಂದಲೇ ಅವರು ಗುರುತಿಸಿಕೊಂಡಿದ್ದು, ಹೀಗಿರುವಾಗ ನಿಮ್ಮ ಹುಳುಕನ್ನು ಮೊದಲು ತಿಳಿದುಕೊಳ್ಳಿ ಎಂದು ಹೇಳುತ್ತಾರೆ.