Select Your Language

Notifications

webdunia
webdunia
webdunia
webdunia

BB Season 12: ದೊಡ್ಮನೆಯಲ್ಲಿ ಸದ್ದು ಮಾಡುತ್ತಿರುವ ಸ್ಪರ್ಧಿ ವಿರುದ್ಧ ಬಿತ್ತು ಕೇಸ್‌

BigBoss Season12

Sampriya

ಬೆಂಗಳೂರು , ಗುರುವಾರ, 23 ಅಕ್ಟೋಬರ್ 2025 (17:55 IST)
Photo Credit X
ಬೆಂಗಳೂರು: ಈಚೆಗೆ ಪರಿಸರ ನಿಯಮ ಉಲ್ಲಂಘನೆ ಸಂಬಂಧ ಬಿಗ್‌ಬಾಸ್ ಮನೆಗೆ ಬೀಗ ಹಾಕಿದ ಪ್ರಕರಣದ ಬೆನ್ನಲ್ಲೇ, ಇದೀಗ ಸ್ಪರ್ಧಿಯಾಗಿರುವ ಅಶ್ವಿನಿ ಗೌಡ ವಿರುದ್ಧ ದೂರು ದಾಖಲಾಗಿದೆ. 

ಸ್ಪರ್ಧಿ ರಕ್ಷಿತಾ ಶೆಟ್ಟಿ ಮೇಲೆ ಕೋಪಗೊಂಡ ಬಳಿಕ ಜಾಹ್ನವಿ ಜತೆ ಅಶ್ವಿನಿ ಅವರು ಮಾತನಾಡುವಾಗ S ಪದ ಬಳಕೆ ಮಾಡಿದಕ್ಕೆ ಅಶ್ವಿನಿಗೌಡ ಮತ್ತು ಆಯೋಜಕರ ವಿರುದ್ಧ ಹೈಕೋರ್ಟ್ ವಕೀಲ ಪ್ರಶಾಂತ್ ಮೆತಾಲ್ ಬಿಡದಿ ಠಾಣೆ ಮೆಟ್ಟಿಲೇರಿದ್ದಾರೆ.

ದೂರಿನಲ್ಲಿ ಸಹ ಸ್ಪರ್ಧಿ ರಕ್ಷಿತಾ ಕುರಿತು ಈ ಮಾತನ್ನು ಆಡಿರುವುದರಿಂದ ವ್ಯಕ್ತಿತ್ವ ನಿಂದನೆಯಾಗಿದೆ ಎಂದು  ಆರೋಪಿಸಿ ಅಶ್ವಿನಿಗೌಡ, ಕಲರ್ಸ್ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ , ಕ್ಲಸ್ಟರ್ ಹೆಡ್ ಸುಷ್ಮಾ ಮತ್ತು ಡೈರೆಕ್ಟರ್ ಪ್ರಕಾಶ್ ವಿರುದ್ಧ ದೂರು ನೀಡಿದ್ದರು.  ಬಿಡದಿ ಪೊಲೀಸರು ದೂರು ಸ್ವೀಕರಿಸಿ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?
ಬಿಗ್‌ಬಾಸ್ 12 ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ರಕ್ಷಿತ ರವರಿಗೆ ‘She is S, ಆ Category  ನ  ಎಂದು  ಸ್ಪರ್ಧಿಯಾದ ಅಶ್ವಿನಿ ಗೌಡ ಅವರು ಪದ ಬಳಕೆಯನ್ನು ಮಾಡಿರುತ್ತಾರೆ.

ಇದು ಜಾತಿ ನಿಂದನೆ ಮತ್ತು ವ್ಯಕ್ತಿತ್ವದ ನಿಂದನೆ ಮಾಡುವಂತಹ ವಿಷಯ. ಈ ಸಮಾಜದಲ್ಲಿ ಎಲ್ಲರೂ ಒಂದೇ ಯಾವ ಜಾತಿ ಅಥವಾ ಭೇದವನ್ನು ಹರಡುವಂತಿಲ್ಲ. ಅಶ್ವಿನಿ ಗೌಡ  ಹೇಳಿದ ಮಾತನ್ನು ತೆಗೆಯದೇ ತಮ್ಮ ಟಿಆರ್‌ಪಿ ಹೆಚ್ಚಾಗಲು ಇದನ್ನು ಪ್ರಸಾರ ಮಾಡಿರುತ್ತಾರೆ. ಇದರಿಂದ ಸಮಾಜಕ್ಕೆ ಒಂದು ಕೆಟ್ಟ ಸಂದೇಶವನ್ನು ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ದೀಪಾವಳಿ ಸಂದರ್ಭದಲ್ಲಿ ಗುಡ್‌ನ್ಯೂಸ್ ಹಂಚಿಕೊಂಡ ನಟ ರಾಮ್‌ ಚರಣ್, ಉಪಾಸನಾ ದಂಪತಿ