Select Your Language

Notifications

webdunia
webdunia
webdunia
webdunia

BBK12: ಕಿಚ್ಚ ಸುದೀಪ್ ಯಾರಿಗೂ ಹೆದರಲ್ಲ, ಅಶ್ವಿನಿ ಪರವೂ ಅಲ್ಲ: ಇಂದು ಕಾದಿದೆ ಮಾರಿಹಬ್ಬ

Kiccha Sudeep

Krishnaveni K

ಬೆಂಗಳೂರು , ಶನಿವಾರ, 18 ಅಕ್ಟೋಬರ್ 2025 (14:09 IST)
ಬೆಂಗಳೂರು: ಕಿಚ್ಚ ಸುದೀಪ್ ಯಾವತ್ತೂ ಅಶ್ವಿನಿ ಗೌಡ ಪರವೇ ಇರುತ್ತಾರೆ. ಅವರಿಗೆ ಏನೂ ಹೇಳಲ್ಲ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವವರಿದ್ದರು. ಆದರೆ ಇಂದಿನ ಸಂಚಿಕೆಯಲ್ಲಿ ಕಿಚ್ಚ ಅದೆಲ್ಲದಕ್ಕೂ ತಕ್ಕ ಉತ್ತರ ನೀಡಲಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಈ ವಾರ ಸಾಕಷ್ಟು ವಿಚಾರಗಳು ನಡೆದಿವೆ. ವಿಶೇಷವಾಗಿ ಅಶ್ವಿನಿ ಗೌಡ, ಜಾನ್ವಿ ಹಾಗೂ ರಕ್ಷಿತಾ ಶೆಟ್ಟಿ ನಡುವೆ ವಾಗ್ಯುದ್ಧ ನಡೆದಿದೆ. ಈ ವೇಳೆ ಅಶ್ವಿನಿ ಗೌಡ ಮಾತಿನ ಭರದಲ್ಲಿ ರಕ್ಷಿತಾಗೆ ಮಿತಿ ಮೀರಿ ಮಾತನಾಡಿದ್ದರು.

ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಕಳೆದ ಅಷ್ಟೂ ವಾರಗಳಲ್ಲಿ ಕಿಚ್ಚ ಸುದೀಪ್ ಏನೇ ನಡೆದಿದ್ದರೂ ಅಶ್ವಿನಿ ಗೌಡಗೆ ಏನೂ ಹೇಳಿರಲಿಲ್ಲ. ಹೀಗಾಗಿ ಅಶ್ವಿನಿ ಗೌಡ ಕನ್ನಡ ಪರ ಹೋರಾಟಗಾರ್ತಿ ಎಂದು ಕಿಚ್ಚನಿಗೆ ಅವರನ್ನು ಕಂಡರೆ ಭಯ ಎಂದೆಲ್ಲಾ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಿದ್ದು ಇದೆ.

ಆದರೆ ಇಂದಿನ ಪ್ರೋಮೋದಲ್ಲಿ ಕಿಚ್ಚ ನಾನು ಯಾರಿಗೂ ಭಯಪಡುವವನೂ ಅಲ್ಲ, ಯಾರನ್ನೂ ಬಿಡುವ ಮಾತೇ ಇಲ್ಲ ಎಂದು ನಿರೂಪಿಸಿದ್ದಾರೆ. ನಾವು ಕೊಟ್ಟಿರುವ ಮಾತನ್ನು ತಪ್ಪಲ್ಲ, ತಪ್ಪಾಗಿ ಆಡಿದ ಮಾತಿಗೆ ಬುದ್ಧಿ ಕಲಿಸದೇ ಬಿಡಲ್ಲ. ಒಳ್ಳೆ ಕೆಲಸ ಮಾಡಿದಾಗ ಚಪ್ಪಾಳೆಯನ್ನೂ ತಟ್ತೀವಿ. ಬಾಯಿಗೆ ಬಂದ ಹಾಗೆ ಮಾತನಾಡಿದರೆ ಚೂರು ತಲೆಗೆ ತಟ್ಟಿ ಬುದ್ಧಿನೂ ಹೇಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೆಬಿಸಿ ಶೋನಲ್ಲಿ ರಿಷಬ್ ಶೆಟ್ಟಿ ಗೆದ್ದಿದ್ದೆಷ್ಟು, ಈ ಹಣ ಯಾರಿಗೆ ಕೊಟ್ರು ನೋಡಿ