Webdunia - Bharat's app for daily news and videos

Install App

ಮಾಜಿ ಪತ್ನಿಯ ಸಿನಿಮಾಗೆ ಶುಭಾಶಯ ಕೋರಿದ ಧನುಷ್

Krishnaveni K
ಶುಕ್ರವಾರ, 9 ಫೆಬ್ರವರಿ 2024 (11:52 IST)
Photo Courtesy: Twitter
ಚೆನ್ನೈ: ತಮಿಳು ನಟ ಧನುಷ್ ಮತ್ತು ರಜನೀಕಾಂತ್ ಪುತ್ರಿ ಐಶ್ವರ್ಯಾ ತಮ್ಮ ಬಹುಕಾಲದ ದಾಂಪತ್ಯ ಜೀವನವನ್ನು ಕೊನೆಗಾಣಿಸಿದ್ದರು. ಇದೀಗ ಐಶ್ವರ್ಯಾ ನಿರ್ದೇಶನದ ಲಾಲ್ ಸಲಾಂ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಧನುಷ್ ಜೊತೆಗಿನ ದಾಂಪತ್ಯ ಜೀವನ ಮುರಿದುಕೊಂಡ ನಂತರ ಬಿಡುಗಡೆಯಾಗುತ್ತಿರುವ ಐಶ್ವರ್ಯಾ ನಿರ್ದೇಶನದ ಸಿನಿಮಾವಿದು. ಈ ಸಿನಿಮಾದಲ್ಲಿ ಮಗಳಿಗೆ ತಂದೆ ಸೂಪರ್ ಸ್ಟಾರ್ ರಜನೀಕಾಂತ್ ಕೂಡಾ ಸಾಥ್ ನೀಡಿದ್ದಾರೆ. ರಜನಿ ಈ ಸಿನಿಮಾದಲ್ಲಿ ಮೊಯಿದ್ದೀನ್ ಬಾಬ ಎನ್ನುವ ಪಾತ್ರ ಮಾಡಿದ್ದಾರೆ. ರಜನಿ ನಟಿಸಿದ್ದಾರೆ ಎಂಬ ಕಾರಣಕ್ಕೆ ಸಿನಿಮಾಗೆ ವಿಶೇಷ ಹೈಪ್ ಇದೆ.

ಧನುಷ್ ಶುಭಾಶಯ
ಇನ್ನು, ಹಲವು ವರ್ಷದ ನಂತರ ಐಶ್ವರ್ಯಾ ನಿರ್ದೇಶನದ ಸಿನಿಮಾ ಬಿಡುಗಡೆಯಾಗುತ್ತಿದ್ದು, ತನ್ನ ಮಾಜಿ ಪತ್ನಿಯ ಸಿನಿಮಾಗೆ ಧನುಷ್ ಶುಭಾಶಯ ಕೋರಿದ್ದಾರೆ. ಐಶ್ವರ್ಯಾ ಜೊತೆ ವಿಚ್ಛೇದನವಾದರೂ ಮಾಜಿ ಮಾವ ರಜನೀಕಾಂತ್ ಎಂದರೆ ಧನುಷ್ ಗೆ ಅಪಾರ ಗೌರವವಿದೆ. ಈ ಸಿನಿಮಾದಲ್ಲಿ ರಜನಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ಸಿನಿಮಾಗೆ ಧನುಷ್ ಶುಭಾಶಯ ಕೋರಿದ್ದಾರೆ.

ಆದರೆ ಈ ಬಗ್ಗೆ ಸಂದೇಶ ಬರೆಯುವಾಗ ಎಲ್ಲೂ ಮಾಜಿ ಪತ್ನಿ ಐಶ್ವರ್ಯಾ ಹೆಸರನ್ನು ಉಲ್ಲೇಖಿಸಿಲ್ಲ. ವಿಶೇಷವೆಂದರೆ ಇಂದು ಧನುಷ್ ನಟಿಸಿರುವ ಕ್ಯಾಪ್ಟನ್ ಮಿಲ್ಲರ್ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಹಾಗಿದ್ದರೂ ಐಶ್ವರ್ಯಾ ಸಿನಿಮಾಗೆ ಶುಭಾಶಯ ಕೋರುವುದನ್ನು ಮರೆತಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿ ಫ್ಯಾನ್ಸ್, ರಮ್ಯಾ ಜಟಾಪಟಿಯಲ್ಲಿ ಹೊಸ ತಿರುವು, ದರ್ಶನ್ ಫ್ಯಾನ್ಸ್‌ಗೆ ನಡುಕ ಶುರು

ಡಿ ಫ್ಯಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ: ನಟ ಚೇತನ್ ಕುಮಾರ್‌ಗೆ ನಟಿ ರಮ್ಯಾ ಧನ್ಯವಾದ

ತಮ್ಮ ಕುಟುಂಬದಲ್ಲೇ ಇಷ್ಟೆಲ್ಲಾ ನಡೆಯುವಾಗ ಸುಮ್ಮನಿದ್ರು: ಯುವ ಮಾಜಿ ಪತ್ನಿ ಪೋಸ್ಟ್ ವೈರಲ್

ವಿದೇಶದಲ್ಲಿ 'ಸು ಫ್ರಮ್ ಸೋ' ನೋಡಲು ಕಾಯುತ್ತಿರುವ ಕನ್ನಡಭಿಮಾನಿಗಳಿಗೆ ಗುಡ್‌ನ್ಯೂಸ್‌

ದರ್ಶನ್, ರಮ್ಯಾ ರಗಳೆ ನಡುವೆ ಪವಿತ್ರಾ ಗೌಡ ಇಂದೇನಿದೂ ಪೋಸ್ಟ್‌

ಮುಂದಿನ ಸುದ್ದಿ
Show comments