Publish Date: Sat, 16 Dec 2023 (08:57 IST)
Updated Date: Sat, 16 Dec 2023 (08:57 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೀತಾ ಧಾರವಾಹಿಯ ಜನಪ್ರಿಯ ನಾಯಕ ನಟ ವಿಜಿ ಅಲಿಯಾಸ್ ನಟ ಧನುಷ್ ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಗೀತಾ ಧಾರವಾಹಿಯ ನಾಯಕ ಧನುಷ್ ಮತ್ತು ನಾಯಕಿ ಭವ್ಯಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಹಲವು ಬಾರಿ ಇವರಿಗೆ ಈ ಪ್ರಶ್ನೆ ಕೇಳಲಾಗಿತ್ತು. ಆದರೆ ನಾವಿಬ್ಬರೂ ಉತ್ತಮ ಸ್ನೇಹಿತರು ಎಂದೇ ಈ ಜೋಡಿ ಹೇಳುತ್ತಾ ಬರುತ್ತಿತ್ತು.
ಆದರೂ ಇಬ್ಬರೂ ಸದಾ ಜೊತೆಯಾಗಿ ಓಡಾಡಿಕೊಂಡಿರುವುದನ್ನು ನೋಡಿ ಇಬ್ಬರೂ ನಿಜ ಜೀವನದಲ್ಲೂ ಒಂದಾಗಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅದೀಗ ಸುಳ್ಳಾಗಿದೆ.
ಧನುಷ್ ಬೇರೊಬ್ಬ ಯುವತಿ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ನಿಶ್ಚಿತಾರ್ಥ ವಿಚಾರವನ್ನು ಸ್ವತಃ ಭವ್ಯಾ ಗೌಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಹೊಸ ಜೋಡಿ ಜೊತೆ ಫೋಟೋ ತೆಗೆಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಧಾರವಾಹಿಯಲ್ಲಿ ಗಂಡ-ಹೆಂಡತಿಯಾಗಿ ಎಲ್ಲರ ಮನಗೆದ್ದಿರುವ ಜೋಡಿ ನಿಜ ಜೀವನದಲ್ಲೂ ಒಂದಾಗಬಹುದು ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಧನುಷ್ ಬೇರೊಬ್ಬ ಯುವತಿ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿರುವುದು ನೋಡಿ ಹೃದಯ ಚೂರಾಗಿದೆ.