Select Your Language

Notifications

webdunia
webdunia
webdunia
webdunia

ಮತ್ತೊಮ್ಮೆ ತಮಿಳು ಅಭಿಮಾನಿಗಳ ಮನಸ್ಸು ಗೆದ್ದ ಶಿವರಾಜ್ ಕುಮಾರ್

ಮತ್ತೊಮ್ಮೆ ತಮಿಳು ಅಭಿಮಾನಿಗಳ ಮನಸ್ಸು ಗೆದ್ದ ಶಿವರಾಜ್ ಕುಮಾರ್
ಚೆನ್ನೈ , ಬುಧವಾರ, 3 ಜನವರಿ 2024 (09:48 IST)
Photo Courtesy: Twitter
ಚೆನ್ನೈ: ಧನುಷ್ ನಾಯಕರಾಗಿರುವ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಕನ್ನಡ ನಟ ಶಿವರಾಜ್ ಕುಮಾರ್ ಕೂಡಾ ಅಭಿನಯಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.

ಈ ಸಿನಿಮಾದ ಮೂರನೇ ಹಾಡು ನಿನ್ನೆ ಬಿಡುಗಡೆಯಾಗಿದೆ. ಹಾಡಿನಲ್ಲಿ ಮುಖ್ಯವಾಗಿ ಶಿವಣ್ಣ ಸಹ ಕಲಾವಿದರೊಂದಿಗೆ ಹೆಜ್ಜೆ ಹಾಕುವ ದೃಶ್ಯವಿದೆ.

ಈ ವಯಸ್ಸಿನಲ್ಲೂ ಶಿವಣ್ಣ ಇಷ್ಟು ಉತ್ಸಾಹದಿಂದ ಸ್ಟೆಪ್ಸ್ ಹಾಕುವುದು ನೋಡಿ ತಮಿಳು ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಇವರಿಗೆ ನಿಜವಾಗಿ ವಯಸ್ಸು 60 ಆಗಿದೆಯೇ ಇಲ್ಲಾ 20 ವರ್ಷವಾ ಎಂದು ಸೋಷಿಯಲ್ ಮೀಡಿಯಾ ಮೂಲಕ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದಕ್ಕಿಂತ ಮೊದಲು ರಜನೀಕಾಂತ್ ನಾಯಕರಾಗಿದ್ದ ಜೈಲರ್ ಸಿನಿಮಾದಲ್ಲಿ ಶಿವಣ‍್ಣ ಅತಿಥಿ ಪಾತ್ರ ಮಾಡಿದ್ದರು. ಆ ಸಿನಿಮಾದಲ್ಲಿ ಶಿವಣ್ಣನ ಪಾತ್ರ ಚಿಕ್ಕದಾಗಿದ್ದರೂ ಅವರ ಅಪಿಯರೆನ್ಸ್ ತಮಿಳು ಪ್ರೇಕ್ಷಕರ ಗಮನ ಸೆಳೆದಿತ್ತು. ಅಷ್ಟೇ ಅಲ್ಲ, ಶಿವಣ್ಣನಿಗೆ ಪರಭಾಷೆಗಳಿಂದ ಸಾಕಷ್ಟು ಬೇಡಿಕೆ ಬಂದಿತ್ತು. ಇದೀಗ ಮತ್ತೊಮ್ಮೆ ಕ್ಯಾಪ್ಟನ್ ಮಿಲ್ಲರ್ ಮೂಲಕ ಶಿವಣ್ಣ ಮೋಡಿ ಮಾಡಲು ಹೊರಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಡುಗಡೆಯಾದ 12 ಗಂಟೆಯಲ್ಲಿ 1 ಮಿಲಿಯನ್ ವೀಕ್ಷಣೆ: ದಾಖಲೆ ಮಾಡಿದ ಧಾರವಾಹಿ ಹಾಡು