ಜೋಗಿ ಪ್ರೇಮ್-ದರ್ಶನ್ ಸಿನಿಮಾ ಘೋಷಣೆಗೆ ಡೇಟ್ ಫಿಕ್ಸ್

Krishnaveni K
ಶುಕ್ರವಾರ, 9 ಫೆಬ್ರವರಿ 2024 (09:43 IST)
Photo Courtesy: Instagram
ಬೆಂಗಳೂರು: ಜೋಗಿ ಪ್ರೇಮ್ ಮತ್ತು ನಟ ದರ್ಶನ್ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಸಿನಿಮಾ ಘೋಷಣೆ ಯಾವಾಗ ಎಂಬ ಬಗ್ಗೆ ಈಗ ಸುದ್ದಿಯೊಂದು ಹರಿದಾಡುತ್ತಿದೆ.

ಮೊನ್ನೆಯಷ್ಟೇ ದರ್ಶನ್, ಜೋಗಿ ಪ್ರೇಮ್ ಕುಟುಂಬ ಮತ್ತು ಆಪ್ತರ ಜೊತೆ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ದರ್ಶನ್-ಪ್ರೇಮ್ ಸಿನಿಮಾದ ಬಗ್ಗೆ ಚರ್ಚೆ ನಡೆದಿತ್ತು ಎನ್ನಲಾಗಿದೆ. ಈ ಪಾರ್ಟಿಯಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕೂಡಾ ಭಾಗಿಯಾಗಿದ್ದರು. ಜೊತೆಗೆ ಸಿನಿಮಾಗೆ ಬಂಡವಾಳ ಹೂಡುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಮಾಲಿಕ ವೆಂಕಟ್ ನಾರಾಯಣ್ ಕೂಡಾ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು.

ದರ್ಶನ್-ಪ್ರೇಮ್ ಹಿಟ್ ಕಾಂಬಿನೇಷನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಮೆಜೆಸ್ಟಿಕ್ ಹೆಸರು ತಂದುಕೊಟ್ಟಿದ್ದರೂ ಮುಂದೆ ಅವರಿಗೆ ಬ್ರೇಕ್ ಕೊಟ್ಟಿದ್ದು ಪ್ರೇಮ್ ನಿರ್ದೇಶನದ ಕರಿಯ. 2003 ರಲ್ಲಿ ಈ ಸಿನಿಮಾ ಮೂಲಕ ಪ್ರೇಮ್-ದರ್ಶನ್ ಜೊತೆಯಾಗಿ ಮೊದಲ ಸಿನಿಮಾ ಮಾಡಿದ್ದರು. ಈ ಸಿನಿಮಾ ಭಾರೀ ಹಿಟ್ ಆಗಿತ್ತು.  ಆ ಸಿನಿಮಾವನ್ನು ಜನ ಇಂದಿಗೂ ನೆನೆಸಿಕೊಳ್ಳುತ್ತಾರೆ. ದರ್ಶನ್ ಮಾಸ್ ಹೀರೋ ಆಗಿ ಬೆಳೆದರೆ ಪ್ರೇಮ್ ಮಾಸ್ ನಿರ್ದೇಶಕರಾಗಿ ಹೆಸರು ಮಾಡಿದರು.

ಇದೇ ಕಾಂಬಿನೇಷನ್ ಈಗ ಮತ್ತೆ ಜೊತೆಯಾಗುತ್ತಿದೆ ಎನ್ನುವುದೇ ಸಿನಿ ರಸಿಕರಿಗೆ ಖುಷಿಯ ಸಂಗತಿ. ಈಗಾಗಲೇ ಚಿತ್ರ ಘೋಷಣೆ ಮಾಡಿ ಕೆಲವು ಸಮಯವೇ ಕಳೆದಿದೆ. ಇದೀಗ ಮುಹೂರ್ತ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮೂಲಗಳ ಪ್ರಕಾರ ಫೆಬ್ರವರಿ 16 ರಂದು ದರ್ಶನ್ ಹುಟ್ಟುಹಬ್ಬದಂದು ಸಿನಿಮಾಗೆ ಚಾಲನೆ ಸಿಗಲಿದೆ.

ಇದೇ ಕಾರಣಕ್ಕೇ ವೆಂಕಟ್ ನಾರಾಯಣ್, ಪ್ರೇಮ್, ದರ್ಶನ್ ಜೊತೆಯಾಗಿ ಕೂತು ಮಾತುಕತೆ ನಡೆಸಿದ್ದಾರೆ. ಆದರೆ ಈ ಪಾರ್ಟಿಯಲ್ಲಿ ಸಂಜಯ್ ದತ್ ಕೂಡಾ ಇದ್ದಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸಂಜು ಬಾಬ ಈಗಾಗಲೇ ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ನಾಯಕರಾಗಿರುವ ಕೆಡಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಕಾರಣಕ್ಕೆ ಪ್ರೇಮ್ ಗೆ ಸ್ನೇಹಿತರಾಗಿದ್ದಾರೆ. ಹೀಗಾಗಿಯೇ ಪಾರ್ಟಿಯಲ್ಲಿದ್ದರೋ ಅಥವಾ ದರ್ಶನ್ ಸಿನಿಮಾದಲ್ಲಿ ಸಂಜು ಬಾಬ ಕೂಡಾ ಅಭಿನಯಿಸಲಿದ್ದಾರಾ ಎನ್ನುವುದು ಗೊತ್ತಾಗಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮತ್ತೇ ಪ್ರೀತಿಯಲ್ಲಿ ಬಿದ್ರಾ ಸಾನಿಯಾ ಮಿರ್ಜಾ, ಕುತೂಹಲ ಮೂಡಿಸಿದ ಈ ಫೋಟೋ

ಮಧ್ಯದ ಬೆರಳು ತೋರಿಸಿ ದುರ್ವತನೆ ತೋರಿದ ಆರ್ಯನ್ ಖಾನ್‌ಗೆ ಬಿಗ್‌ ಶಾಕ್‌

ಎರಡನೇ ಬಾರಿ ಜೈಲು ಸೇರಿದ ದರ್ಶನ್ ಎಷ್ಟು ತೂಕ ಇಳಿಸಿಕೊಂಡಿದ್ದಾರೆ: ಶಾಕಿಂಗ್

ಡಿಡಿಎಲ್‌ಜಿಗೆ 30 ವರ್ಷ: ಲಂಡನ್‌ನಲ್ಲಿ ಗಮನ ಸೆಳೆದ ಶಾರುಖ್‌, ಕಾಜೋಲ್ ಜೋಡಿ

ಕಾಂತಾರ 2ರ ನಟ ನಟಿಗೆ ಐಎಂಡಿಬಿ ಟಾಪ್ ಪಟ್ಟಿಯಲ್ಲಿ ಸ್ಥಾನ, ಯಾರಿಗೆ ಗೊತ್ತಾ

ಮುಂದಿನ ಸುದ್ದಿ
Show comments