Webdunia - Bharat's app for daily news and videos

Install App

ಪ್ರಭಾಸ್ ಜೊತೆ ರಶ್ಮಿಕಾ ರೊಮ್ಯಾನ್ಸ್: ಎಲ್ಲಾ ಅನಿಮಲ್ ನಿರ್ದೇಶಕರ ಮಹಿಮೆ!

Krishnaveni K
ಶುಕ್ರವಾರ, 9 ಫೆಬ್ರವರಿ 2024 (08:40 IST)
Photo Courtesy: Twitter
ಹೈದರಾಬಾದ್: ಟಾಲಿವುಡ್, ಬಾಲಿವುಡ್ ನಲ್ಲಿ ಸ್ಟಾರ್ ನಟರಿಗೆ ನಾಯಕಿಯಾಗಿ ಭಾರೀ ಬೇಡಿಕೆಯಲ್ಲಿರುವ ನಟಿ ರಶ್ಮಿಕಾ ಮಂದಣ್ಣಗೆ ಈಗ ಮತ್ತೊಂದು ಬಂಪರ್ ಆಫರ್ ಬಂದಿದೆ.

ಅನಿಮಲ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮುಂದಿನ ಸಿನಿಮಾ ರೆಬಲ್ ಸ್ಟಾರ್ ಪ್ರಭಾಸ್ ಜೊತೆ. ಈ ಸಿನಿಮಾಗೆ ಸ್ಪಿರಿಟ್ ಎಂದು ಟೈಟಲೂ ಕೂಡಾ ಫಿಕ್ಸ್ ಆಗಿದೆ. ಇದೀಗ ಈ ಸಿನಿಮಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ಅಭಿನಯಿಸಿದ್ದರು. ಹೀಗಾಗಿ ಸಂದೀಪ್ ರೆಡ್ಡಿಗೆ ರಶ್ಮಿಕಾ ಆಪ್ತರಾಗಿದ್ದಾರೆ. ಇದೇ ಕಾರಣಕ್ಕೆ ಸಂದೀಪ್ ತಮ್ಮ ಮುಂದಿನ ಸಿನಿಮಾಗೂ ರಶ್ಮಿಕಾಗೇ ಅವಕಾಶ ನೀಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆಯೊಂದೇ ಬರಬೇಕಿದೆ.

ಟಾಲಿವುಡ್ ನಲ್ಲಿ ಈಗಾಗಲೇ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಪುಷ್ಪ 2 ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ವಿಜಯ್ ದೇವರಕೊಂಡ, ಅಲ್ಲು ಅರ್ಜುನ್, ಮಹೇಶ್ ಬಾಬು ಮುಂತಾದ ಸ್ಟಾರ್ ನಟರಿಗೆ ನಾಯಕಿಯಾಗಿದ್ದಾರೆ. ಇದೀಗ ಪ್ರಭಾಸ್ ಜೊತೆ ನಟಿಸುವ ಅವಕಾಶ ಸಿಕ್ಕಿದೆ.

ಸದ್ಯಕ್ಕೆ ಪ್ರಭಾಸ್ ಎರಡು ತಿಂಗಳು ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಈಗಷ್ಟೇ ಸಲಾರ್ ಸಿನಿಮಾ ಬಿಡುಗಡೆಯಾಗಿದ್ದು, ಇನ್ನು ಸ್ಪಿರಿಟ್ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ರಶ್ಮಿಕಾ ಸಂಭಾವನೆ 4.5 ಕೋಟಿಗೆ ಏರಿಕೆಯಾಗಿದೆ ಎಂಬ ಸುದ್ದಿಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಂಜನಾ ಬುರ್ಲಿ ಹೊಸ ಧಾರವಾಹಿಗೆ ನಾಯಕಿ, ವೀಕ್ಷಕರು ಇವರು ಬೇಡ ಅಂತಿರೋದ್ಯಾಕೆ

ಗುಜರಾತ್‌ನಿಂದ ಎಮ್ಮೆ ಖರೀದಿಸಲು ಹೋಗಿ ಟೋಪಿ ಹಾಕಿಕೊಂಡ ನಿರ್ದೇಶಕ ಜೋಗಿ ಪ್ರೇಮ್

ತಮಿಳು ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಬರೆದ ಕೂಲಿ

46ವರ್ಷಗಳ ಬಳಿಕ ಸ್ಕ್ರಿನ್ ಹಂಚಿಕೊಳ್ಳಲಿದ್ದಾರೆ ದಕ್ಷಿಣ ಭಾರತದ ಸ್ಟಾರ್ ನಟರು

ದರ್ಶನ್ ಭೇಟಿಯಾದ ಬೆನ್ನಲ್ಲೇ ಡೆವಿಲ್‌ ಸಿನಿಮಾದ ಬಿಗ್‌ಅಪ್ಡೇಟ್‌ ಕೊಟ್ಟ ವಿಜಯಲಕ್ಷ್ಮಿ

ಮುಂದಿನ ಸುದ್ದಿ
Show comments