Select Your Language

Notifications

webdunia
webdunia
webdunia
webdunia

ರಶ್ಮಿಕಾ ಮಂದಣ್ಣಗೆ ಈ ಕಾರಣಕ್ಕೆ ಥ್ಯಾಂಕ್ಸ್ ಹೇಳಿದ ಚಿಕ್ಕಣ್ಣ

Chikkanna

Krishnaveni K

ಬೆಂಗಳೂರು , ಗುರುವಾರ, 8 ಫೆಬ್ರವರಿ 2024 (10:02 IST)
ಬೆಂಗಳೂರು: ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಿಂದ ದೂರವಾಗಿದ್ದಾರೆ, ಕನ್ನಡ ಮರೆತಿದ್ದಾರೆ ಎಂದು ಎಲ್ಲರೂ ದೂರಬಹುದು. ಆದರೆ ಇದೀಗ ನಟ ಚಿಕ್ಕಣ್ಣ ತಮ್ಮ ಸಿನಿಮಾ ಸಕ್ಸಸ್ ಪಾರ್ಟಿಯಲ್ಲಿ ರಶ್ಮಿಕಾರನ್ನು ನೆನೆದು ಧನ್ಯವಾದ ಸಲ್ಲಿಸಿದ್ದಾರೆ. ಇದಕ್ಕೆ ಕಾರಣವೂ ಇದೆ.

ಚಿಕ್ಕಣ್ಣ ನಾಯಕರಾಗಿ ಅಭಿನಯಿಸಿದ್ದ ಉಪಾಧ‍್ಯಕ್ಷ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಸಿನಿಮಾ ಸಕ್ಸಸ್ ಪಾರ್ಟಿಯನ್ನು ಚಿತ್ರತಂಡ ಆಯೋಜಿಸಿತ್ತು. ಸಕ್ಸಸ್ ಪಾರ್ಟಿಯಲ್ಲಿ ಚಿಕ್ಕಣ್ಣ ತಮ್ಮ ಸಿನಿಮಾ ವಿಕ್ಷಿಸಿದ ಫ್ಯಾನ್ಸ್, ಶುಭ ಕೋರಿದ ಸ್ಟಾರ್ ಕಲಾವಿದರಿಗೆಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಈ ವೇಳೆ ರಶ್ಮಿಕಾರನ್ನು ಸ್ಮರಿಸಿಕೊಂಡಿದ್ದಾರೆ.

ರಶ್ಮಿಕಾರನ್ನು ನೆನೆಸಿಕೊಂಡಿದ್ದೇಕೆ ಚಿಕ್ಕಣ್ಣ?
ಉಪಾಧ್ಯಕ್ಷ ಸಿನಿಮಾಗೆ ಯಶಸ್ಸು ಕೋರಿ ಅನೇಕ ಕಲಾವಿದರು ವಿಡಿಯೋ ಬೈಟ್ ಕೊಟ್ಟಿದ್ದರು. ಆ ಪೈಕಿ ರಶ್ಮಿಕಾ ಕೂಡಾ ಒಬ್ಬರು. ಉಪಾಧ್ಯಕ್ಷ ಸಿನಿಮಾ ಬಗ್ಗೆ ವಿಡಿಯೋ ಬೈಟ್ ಕೊಟ್ಟಿದ್ದ ರಶ್ಮಿಕಾ, ಇಡೀ ತಂಡ ಕಷ್ಟಪಟ್ಟು ಕೆಲಸ ಮಾಡಿದೆ. ಸಿನಿಮಾಗೆ ಯಶಸ್ಸು ಸಿಕ್ಕಲಿ ಎಂದು ಹಾರೈಸಿದ್ದರು. ಇದೇ ಕಾರಣಕ್ಕೆ ರಶ್ಮಿಕಾಗೆ ಚಿಕ್ಕಣ್ಣ ಸಕ್ಸಸ್ ಪಾರ್ಟಿಯಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.

ಕೇವಲ ರಶ್ಮಿಕಾ ಮಾತ್ರವಲ್ಲ ಈ ಸಿನಿಮಾ ಶೂಟಿಂಗ್ ಹಂತದಲ್ಲಿರುವಾಗಲೇ ಶಿವಣ್ಣ ಸೆಟ್ ಗೆ ಬಂದು ಶುಭ ಕೋರಿದ್ದರು. ಡಿ ಬಾಸ್ ದರ್ಶನ್, ಯಶ್, ರಿಷಬ್ ಶೆಟ್ಟಿ, ಉಪೇಂದ್ರ, ಡಾಲಿ ಧನಂಜಯ ಸೇರಿದಂತೆ ಅನೇಕ ಕಲಾವಿದರು ಚಿಕ್ಕಣ್ಣ ಸಿನಿಮಾಗೆ ಶುಭ ಕೋರಿ ವಿಡಿಯೋ ತುಣುಕು ಹಂಚಿಕೊಂಡಿದ್ದರು. ಇದರಿಂದ ಚಿತ್ರದ ಪ್ರಚಾರಕ್ಕೆ ಅನುಕೂಲವಾಯಿತು.

ಹೀಗಾಗಿ ಈ ಸ್ಟಾರ್ ನಟರಿಗೆಲ್ಲರಿಗೂ ಚಿಕ್ಕಣ್ಣ ವಿಶೇಷವಾಗಿ ಧನ್ಯವಾದ ಸಲ್ಲಿಸಿದ್ದಾರೆ. ಎಲ್ಲರ ಹಾರೈಕೆಯಿಂದಲೇ ಈ ಯಶಸ್ಸು ಸಿಕ್ಕಿದೆ. ಎಲ್ಲರ ಬಳಿಯೂ ನನಗೆ ಹೋಗಲು ಸಾಧ್ಯವಾಗಲಿಲ್ಲ. ಹಾಗಿದ್ದರಿಂದ ಪ್ರೀತಿಯಿಂದ ವಿಡಿಯೋ ಬೈಟ್ ಕೊಟ್ಟರು. ಎಲ್ಲರಿಗೂ ಧನ್ಯವಾದ ಎಂದಿದ್ದಾರೆ ಚಿಕ್ಕಣ್ಣ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಲ್ ಸಲಾಂ ಸಿನಿಮಾಗೆ ಪ್ರತೀ ನಿಮಿಷಕ್ಕೆ 1 ಕೋಟಿ ಸಂಭಾವನೆ ಪಡೆದ ತಲೈವಾ ರಜನಿ