Publish Date: Sat, 20 Jan 2024 (10:20 IST)
Updated Date: Sat, 20 Jan 2024 (10:24 IST)
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಜೊತೆ ತಾವು ಎಂಗೇಜ್ ಮೆಂಟ್ ಆಗುತ್ತಿರುವುದಾಗಿ ವರದಿಗಳು ಹರಡಿರುವ ಬಗ್ಗೆ ನಟ ವಿಜಯ್ ದೇವರಕೊಂಡ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ಇಬ್ಬರೂ ವಿಯೆಟ್ನಾಂಗೆ ಜೊತೆಯಾಗಿ ಪ್ರವಾಸ ಮಾಡಿದ್ದರು ಎಂಬುದಕ್ಕೆ ಕೆಲವು ಫೋಟೋಗಳು ಪುರಾವೆಯಾಗಿ ಸಿಕ್ಕಿತ್ತು. ಅದರ ಜೊತೆಗೆ ಇಬ್ಬರೂ ಫೆಬ್ರವರಿಯಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಇತ್ತು. ಬಳಿಕ ವಿಜಯ್ ದೇವರಕೊಂಡ ಟೀಂ ಇದೆಲ್ಲಾ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿತ್ತು.
ಇದೀಗ ಸ್ವತಃ ವಿಜಯ್ ದೇವರಕೊಂಡ ರೂಮರ್ ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿಲ್ಲ. ಬಹುಶಃ ಮಾಧ‍್ಯಮದವರು ಪ್ರತೀ ಎರಡು ವರ್ಷಕ್ಕೊಮ್ಮೆ ಮದುವೆಯಾಗಬೇಕು ಎಂದು ಬಯಸುತ್ತಾರೆ. ಪ್ರತೀ ವರ್ಷವೂ ಈ ರೂಮರ್ ಕೇಳುತ್ತೇನೆ. ಎಲ್ಲರೂ ನನ್ನ ಮದುವೆಗಾಗಿಯೇ ಕಾಯುತ್ತಿರುವಂತಿದೆ ಎಂದು ವಿಜಯ್ ಹೇಳಿದ್ದಾರೆ.
ಈ ಮೂಲಕ ಮದುವೆ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ. ಆದರೆ ರಶ್ಮಿಕಾ ಮತ್ತು ವಿಜಯ್ ಕಳೆದ ಕೆಲವು ಸಮಯದಿಂದ ಡೇಟಿಂಗ್ ನಲ್ಲಿದ್ದಾರೆ ಎಂಬ ಗುಮಾನಿ ಮಾತ್ರ ಅಭಿಮಾನಿಗಳಲ್ಲಿದೆ.