Publish Date: Fri, 02 Feb 2024 (16:05 IST)
Updated Date: Fri, 02 Feb 2024 (16:09 IST)
ಹೈದರಾಬಾದ್: ಟಾಲಿವುಡ್ ಸ್ಟಾರ್ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆಯಾಗಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಅನುಷ್ಕಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಆದರೆ ಇದು ನಿಜವಾದ ಮದುವೆಯಲ್ಲ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಸೇರಿದಂತೆ ನಟಿಯರಿಗೆ ಕಾಡಿದ ಡೀಪ್ ಫೇಕ್ ವಿಡಿಯೋ ಕಾಟ. ಡೀಪ್ ಫೇಕ್ ತಂತ್ರಜ್ಞಾನ ಬಳಸಿ ಇಬ್ಬರೂ ಮದುವೆಯಾಗಿರುವಂತೆ ಫೋಟೋ ಹರಿಯಬಿಡಲಾಗಿದೆ. ಇದನ್ನು ನೋಡಿ ಒಮ್ಮೆಲೆ ಫ್ಯಾನ್ಸ್ ಶಾಕ್ ಆಗಿದ್ದು ನಿಜ. ಆದರೆ ತಮ್ಮ ಮಗಳ ಫೋಟೋವನ್ನು ಈ ರೀತಿ ದುರ್ಬಳಕೆ ಮಾಡಿದ್ದರ ವಿರುದ್ಧ ಅನುಷ್ಕಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಅನುಷ್ಕಾ-ಪ್ರಭಾಸ್ ಡೇಟಿಂಗ್ ರೂಮರ್
ಬಾಹುಬಲಿ ಸಿನಿಮಾ ಬಳಿಕ ಈ ತಾರಾ ಜೋಡಿ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ, ಸದ್ಯದಲ್ಲಿಯೇ ಮದುವೆಯಾಗುತ್ತಾರೆ ಎಂದು ರೂಮರ್ ಇತ್ತು. ಅಭಿಮಾನಿಗಳೂ ಈ ಆನ್ ಸ್ಕ್ರೀನ್ ಹಿಟ್ ಜೋಡಿ ನಿಜ ಜೀವನದಲ್ಲೂ ಒಂದಾಗಲಿ ಎಂದು ಬಯಸಿದ್ದರು. ಆದರೆ ಇಬ್ಬರೂ ಈ ಬಗ್ಗೆ ಎಲ್ಲೂ ಅಧಿಕೃತ ಹೇಳಿಕೆ ನೀಡಿರಲಿಲ್ಲ.
ಆದರೆ ಈಗ ಸೆಲೆಬ್ರಿಟಿಗಳ ನಕಲಿ ಫೋಟೋ, ವಿಡಿಯೋ ಹರಿಯಬಿಡುವ ಡೀಪ್ ಫೇಕ್ ತಂತ್ರಜ್ಞಾನ ಬಳಸಿ ಇಬ್ಬರೂ ಮದುವೆಯಾಗಿರುವಂತೆ ಬಿಂಬಿಸಲಾಗಿದೆ. ಇಂತಹ ನಕಲಿ ಸುದ್ದಿ ಮತ್ತು ಫೋಟೋ ಪ್ರಕಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅನುಷ್ಕಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.