Publish Date: Tue, 16 Jan 2024 (10:40 IST)
Updated Date: Tue, 16 Jan 2024 (10:54 IST)
ಮುಂಬೈ: ಇತ್ತೀಚೆಗಿನ ದಿನಗಳಲ್ಲಿ ಡೀಪ್ ಫೇಕ್ ವಿಡಿಯೋಗೆ ಸಾಕಷ್ಟು ಸೆಲೆಬ್ರಿಟಿಗಳು ಬಲಿಯಾಗುತ್ತಿದ್ದಾರೆ. ಆ ಸಾಲಿಗೆ ಈಗ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಸೇರಿಕೊಂಡಿದ್ದಾರೆ.
ಸಚಿನ್ ತೆಂಡುಲ್ಕರ್ ಸಾಮಾನ್ಯವಾಗಿ ತಮ್ಮ ಕುಟುಂಬದ ಬಗ್ಗೆ ಹೊರಗೆಲ್ಲೂ ಹೇಳಿಕೊಳ್ಳುವುದಿಲ್ಲ. ಅದರಲ್ಲೂ ತಮ್ಮ ಮಕ್ಕಳ ಹುಟ್ಟುಹಬ್ಬಕ್ಕೆ ವಿಶ್ ಮಾಡುವುದು ಬಿಟ್ಟರೆ ಬೇರೆ ವಿಚಾರವನ್ನು ಏನೂ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ.
ಆದರೆ ಇದೀಗ ಸಚಿನ್ ತಮ್ಮ ಮಗಳು ಸಾರಾ ಗೇಮಿಂಗ್ ಆಪ್ ಒಂದರಿಂದ ಲಾಭ ಪಡೆಯುತ್ತಿದ್ದಾಳೆ. ಆಕೆ ಆ ಆಪ್ ನಿಂದಾಗಿ ಸಾಕಷ್ಟು ಹಣ ಗಳಿಸುತ್ತಿದ್ದಾಳೆ ಎನ್ನುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆದರೆ ಇದು ಈ ವಿಡಿಯೋ ಅಸಲಿಯಲ್ಲ ಎಂದು ತಿಳಿದುಬಂದಿದೆ. ಕೆಲವು ದಿನಗಳ ಹಿಂದೆ ರಶ್ಮಿಕಾ ಮಂದಣ್ಣ, ಕಾಜೋಲ್, ಸೇರಿದಂತೆ ಹಲವು ನಟ-ನಟಿಯರ ಡೀಪ್ ಫೇಕ್ ವಿಡಿಯೋ ವೈರಲ್ ಆಗಿತ್ತು. ಅದೇ ರೀತಿ ಈಗ ಯಾರೋ ಸಚಿನ್ ಅವರ ನಕಲಿ ವಿಡಿಯೋವನ್ನು ಈ ರೀತಿ ಹರಿಯಬಿಟ್ಟಿದ್ದಾರೆ.