Webdunia - Bharat's app for daily news and videos

Install App

ಸೆರೆವಾಸದಲ್ಲಿರುವ ದರ್ಶನ್‌ರನ್ನು ಭೇಟಿಯಾದ ಡೆವಿಲ್ ನಿರ್ಮಾಪಕ

Sampriya
ಗುರುವಾರ, 26 ಸೆಪ್ಟಂಬರ್ 2024 (18:09 IST)
ಬೆಂಗಳೂರು:  ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಅಭಿನಯದ ಡೆವಿಲ್ ಸಿನಿಮಾದ ಶೂಟಿಂಗ್ ಅರ್ಧಕ್ಕೆ ನಿಂತಿದೆ. ದರ್ಶನ್ ಜೈಲು ಸೇರಿ 100ದಿನ ಕಳೆದಿದ್ದು, ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರು  ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ದಿಢೀರನೇ ಚಿತ್ರದ ನಿರ್ಮಾಪಕರು ಜೈಲಿಗೆ ಭೇಟಿ ನೀಡಿ ದರ್ಶನ್ ಜತೆ ಮಾತುಕತೆ ನಡೆಸಿದ್ದಾರೆ.

ಇಂದು ಹಣದ ವಿಚಾರವಾಗಿ ಐಟಿ ಅಧಿಕಾರಿಗಳು ದರ್ಶನ್ ವಿಚಾರಣೆ ನಡೆಸಿ ಹೋದಮೇಲೆ ಜೆ.ಬಿ.ಪ್ರಕಾಶ್, ಸುನೀಲ್ ಕುಮಾರ್ ಮತ್ತು ಶ್ರೀನಿವಾಸ  ಅವರು ದರ್ಶನ್ ಭೇಟಿ ಮಾಡಿದ್ದಾರೆ. ಈ ವೇಳೆ ದಾಸನಿಗೆ ನಿರ್ಮಾಪಕರು ಧೈರ್ಯ ತುಂಬಿದ್ದಾರೆ ಎಂಬ ಮಾಹಿತಿಯಿದೆ.

ಭೇಟಿ ವೇಳೆ ಡೆವಿಲ್ ಸಿನಿಮಾದ ನಿರ್ಮಾಪಕರಾಗಿರುವ ಪ್ರಕಾಶ್ ಅವರು ದರ್ಶನ್‌ಗೆ ಡ್ರೈ ಪ್ರೂಟ್ಸ್, ಬಟ್ಟೆ ಹಾಗೂ ಹಣ್ಣುಗಳನ್ನು ತಂದಿದ್ದಾರೆ. ದರ್ಶನ್ ಜತೆ ಸುಮಾರು 20ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ.

ದರ್ಶನ್ ಅವರು ಮುಂದಿನ ಬಹುನಿರೀಕ್ಷಿತ ಡೆವಿಲ್ ಸಿನಿಮಾವನ್ನು ಮಿಲನಾ ಪ್ರಕಾಶ್, ನಿರ್ದೇಶಿಸಿ, ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಶೂಟಿಂಗ್ ಇದೀಗ ಅರ್ಧಕ್ಕೆ ನಿಂತಿದೆ. ಇದೀಗ ದರ್ಶನ್ ಜತೆ ಸಿನಿಮಾ ಕಥೆ ಹಾಗೂ ಮುಂದಿನ ಹೆಜ್ಜೆ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಭಾರೀ ವಿವಾದ ಬೆನ್ನಲ್ಲೇ ರಕ್ಷಾಬಂಧನದ ಜಾಹೀರಾತು ವಾಪಸ್‌ ಪಡೆದ ಜಿವಾ: ನಟಿ ಕೃತಿ ಸನೋನ್‌ಗೆ ಶಾಕ್‌

ಫೋಟೋ ಕೇಳಿದ್ರೆ ಬೈದ್ರೆ… ಭದ್ರತಾ ಸಿಬ್ಬಂದಿ ಜೊತೆ ರಿತೇಶ್ ದೇಶಮುಖ್, ಜೆನಿಲಿಯಾ ನಡೆದುಕೊಂಡ ರೀತಿಗೆ ನೆಟ್ಟಿಗರು ಫಿದಾ Video

ಯಶ್ ಹೇಳಿದ್ರೂ ಕ್ಯಾರೇ ಇಲ್ಲ: ಟಾಕ್ಸಿಕ್ ಸಿನಿಮಾಗೆ ಅಭಿಮಾನಿಗಳೇ ಹೀಗೆ ಮಾಡಿದರೆ ಹೇಗೆ

Toxic: ಟಾಕ್ಸಿಕ್ ಸಿನಿಮಾ ವೀಕ್ಷಿಸುವ ಮುನ್ನ ತಿಳಿದುಕೊಳ್ಳಲೇಬೇಕಾದ 5 ವಿಚಾರಗಳು

ಏನು ಸಿನಿಮಾ ಗುರೂ… ಟಾಕ್ಸಿಕ್ ಫಸ್ಟ್ ಶೋ ನೋಡಿದ ಪ್ರೇಕ್ಷಕರ ರಿವ್ಯೂ ನೋಡಿ Video

ಮುಂದಿನ ಸುದ್ದಿ
Show comments