ಮನೆ ಮುಂದೆ ಅಭಿಮಾನಿ ಕಟ್ಟಿಸಿದ್ದ ಅಪ್ಪು ದೇವಸ್ಥಾನ ಉದ್ಟಾಟಿಸಿದ ಪತ್ನಿ ಅಶ್ವಿನಿ

Sampriya
ಗುರುವಾರ, 26 ಸೆಪ್ಟಂಬರ್ 2024 (17:47 IST)
Photo Courtesy X
ಹಾವೇರಿ:  ಮನೆ ಮುಂದೆ ಅಭಿಮಾನಿ ಕಟ್ಟಿಸಿದ್ದ ಅಪ್ಪು ದೇವಸ್ಥಾನವನ್ನು ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಉದ್ಘಾಟಿಸಿದರು.

ಯಲಗಚ್ಚ ಗ್ರಾಮದ ಉಡಚ್ಚಮ್ಮ ದೇವಿಯ ದರ್ಶನ ಪಡೆದ ಅಶ್ವಿನಿಯವರನ್ನು ಗ್ರಾಮದ ಪ್ರಮುಖ ರಸ್ತೆಯಲ್ಲಿ ಕುಂಬಮೇಳದ ಮೂಲಕ ಅದ್ಧೂರಿಯಾಗಿ ಪುನೀತ್ ಅಭಿಮಾನಿಗಳು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್‌ ಅವರ 6ಅಡಿ ಎತ್ತರದ ಅಪ್ಪು ಮೂರ್ತಿಯನ್ನು ಲೋಕಾರ್ಪಣೆ ಮಾಡಿದರು.

ಅಕ್ಟೋಬರ್ 29ಕ್ಕೆ ಪುನೀತ್ ರಾಜ್‌ಕುಮಾರ್‌ ನಿಧನರಾಗಿ ಮೂರು ವರ್ಷ ತುಂಬುತ್ತೆ. ಅಭಿಮಾನಿಗಳು ಮಾತ್ರ ಪುನೀತ್ ನೆನಪಿನಲ್ಲಿ ಒಂದಲ್ಲ ಒಂದು ಸಮಾಜಮುಖಿ ಕಾರ್ಯದ ಮೂಲಕ ಅವರ ಸ್ಮರಣೆ ಮಾಡುತ್ತಲೇ ಇದ್ದಾರೆ.

ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ ಯಲಗಚ್ಚ ಗ್ರಾಮದ ಪ್ರಕಾಶ ಮೊರಬದ ತಮ್ಮ ಮನೆಯ ಸ್ವಂತ ಜಾಗದಲ್ಲಿ ತಮ್ಮ ನೆಚ್ಚಿನ ನಟ ಪುನೀತ್ ರಾಜಕುಮಾರ್ ಅವರ ದೇವಸ್ಥಾನ ನಿರ್ಮಿಸಿದ್ದಾರೆ. ದೇವಸ್ಥಾನದಲ್ಲಿ ಪುನೀತ್ ರಾಜಕುಮಾರ್ ಮೂರ್ತಿ ಅನಾವರಣ ಮಾಡಿ, ಪ್ರಕಾಶ ಪುತ್ರಿಗೆ ಅಪೇಕ್ಷಾ ಎಂದು ನಾಮಕರಣ ಮಾಡಿದರು. ಅಪ್ಪು ಮೂರ್ತಿಯನ್ನು ನೋಡಿದ ಅಶ್ವಿನಿ ಭಾವುಕರಾದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments