Publish Date: Wed, 01 Nov 2017 (12:26 IST)
Updated Date: Wed, 01 Nov 2017 (12:36 IST)
ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿಗಳಿಗಾಗಿ `ನೋಡಿ ಸ್ವಾಮಿ ನಾವು ಇರೋದೆ ಹೀಗೆ’ ಎಂಬ ವಿಶೇಷ ಟಾಸ್ಕ್ ನೀಡಿದ್ದರು.
ಟಾಸ್ಕ್ ನಲ್ಲಿ ತಾವು ಪಡೆಯುವ ಚೀಟಿಯಲ್ಲಿರುವ ಪ್ರಾಣಿಗಳ ಲಕ್ಷಣವನ್ನು ಮನೆಯ ಯಾವ ಸ್ಪರ್ಧಿ ಹೊಂದಿದ್ದಾನೆ ಎಂದು ಹೇಳಬೇಕಿತ್ತು. ಇದರಂತೆ ಒಬ್ಬೊಬ್ಬರಾಗಿ ಚೀಟಿ ತೆಗೆದುಕೊಂಡು ಸ್ಪರ್ಧಿಗಳು ತಮಗೆ ಬಂದಿದ್ದ ಪ್ರಾಣಿಯ ಗುಣಲಕ್ಷಣಗಳನ್ನು ಸೂಕ್ತವಾದ ಸ್ಪರ್ಧಿಗಳ ಹೆಸರನ್ನು ಸೂಕ್ತ ಕಾರಣ ನೀಡಿ ಸ್ಪಷ್ಟನೆ ನೀಡಿದ್ರು. ಮೊದಲಿಗೆ ರಿಯಾಜ್ ತಮ್ಮ ಚೀಟಿಯಲ್ಲಿರುವ ಕುದುರೆಯ ಲಕ್ಷಣಗಳು ಜಗನ್ ಗೆ ಹೊಂದುತತ್ತವೆ ಎಂದು ಹೇಳಿ ಸ್ಪಷ್ಟನೆ ನೀಡಿದ್ರು.
ಆದರೆ ಟಾಸ್ಕ್ ನಲ್ಲಿ ಹೆಚ್ಚು ಟಾರ್ಗೆಟ್ ಆಗಿದ್ದು ದಯಾಳ್ ಪಧ್ಮಾನಾಭ್. ಆರು ಮಂದಿ ತಮಗೆ ಸಿಕ್ಕ ಚೀಟಿಯಲ್ಲಿರುವ ಪ್ರಾಣಿಗಳ ಲಕ್ಷಣಗಳು ದಯಾಳ್ ಅವರಲ್ಲಿವೆ ಎಂದು ಮನೆಯ ಸದಸ್ಯರು ಹೇಳಿದ್ರು. ಗೂಬೆಯಂತೆ ನಿಶಾಚಾರಿ, ಚೇಳಿನಂತೆ ಕುಟುಕುವವರು, ಹಂದಿಯಂತೆ ಕೊಳಕು, ಮೊಸಳೆ ಕಣ್ಣೀರು ಸುರಿಸುವವರು, ನರಿಯಂತೆ ಕುತಂತ್ರ ಬುದ್ಧಿ ಹಾಗೂ ಊಸರವಳ್ಳಿಯಂತೆ ಬಣ್ಣ ಬದಲಾಯಿಸುವ ಲಕ್ಷಣಗಳು ದಯಾಳ್ ಅವರಲ್ಲಿ ಇವೆ ಎಂದು ಮನೆಯ ಸದಸ್ಯರು ಹೇಳಿದ್ರು.
ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ದಯಾಳ್, ಎಲ್ಲವನ್ನೂ ನಗುತ್ತಲೇ ಸ್ವೀಕರಿಸಿದರು. ಈ ಎಲ್ಲಾ ಲಕ್ಷಣಗಳು ನನ್ನಲ್ಲಿ ಇರುವುದರಿಂದಲೇ ನಾನು ನಿರ್ದೇಶಕನಾಗಿರುವುದು ಎಂದು ಸಮರ್ಥಿಸಿಕೊಂಡ್ರು.