Publish Date: Fri, 22 Apr 2022 (09:10 IST)
Updated Date: Fri, 22 Apr 2022 (09:15 IST)
ಬೆಂಗಳೂರು: ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಕ್ರಾಂತಿ ಸಿನಿಮಾ ತಂಡ ಸದ್ಯಕ್ಕೆ ಹೈದರಾಬಾದ್ ನಲ್ಲಿ ಶೂಟಿಂಗ್ ನಡೆಸುತ್ತಿದ್ದು, ಶೇ. 70 ರಷ್ಟು ಚಿತ್ರೀಕರಣ ಮುಗಿದಿದೆ. ಇನ್ನೀಗ ಕೆಲವು ಭಾಗದ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ.
ಅದಾದ ಬಳಿಕ ಮೇ ತಿಂಗಳಲ್ಲಿ ಚಿತ್ರತಂಡ ವಿದೇಶಕ್ಕೆ ಹಾರಲಿದೆ. ವಿದೇಶದಲ್ಲಿ ಹಾಡಿನ ಚಿತ್ರೀಕರಣ ನಡೆಸುವ ಸಾಧ‍್ಯತೆಯಿದೆ. ದರ್ಶನ್ ಗೆ ನಾಯಕಿಯಾಗಿ ರಚಿತಾ ರಾಂ ಮತ್ತು ಸುಮಲತಾ ಅಂಬರೀಶ್, ರವಿಚಂದ್ರನ್ ಸೇರಿದಂತೆ ಬಹುತಾರಾಗಣದ ಸಿನಿಮಾ ಇದಾಗಿದೆ.