Select Your Language

Notifications

webdunia
webdunia
webdunia
webdunia

ದರ್ಶನ್ ಗೆ ಇಂದು ಜಾಮೀನು ಸಿಕ್ಕರೆ ನೇರವಾಗಿ ಅವರು ಹೋಗುವ ಸ್ಥಳ ಇಲ್ಲಿಗೆ

Darshan
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಂಧಿತರಾಗಿರುವ ನಟ ದರ್ಶನ್ ಗೆ ಇಂದು ಆರೋಗ್ಯದ ದೃಷ್ಟಿಯಿಂದ ಮಧ್ಯಂತರ ಜಾಮೀನು ಸಿಗುವ ನಿರೀಕ್ಷೆಯಿದೆ. ಜಾಮೀನು ಸಿಕ್ಕರೆ ತಕ್ಷಣವೇ ಅವರು ಎಲ್ಲಿಗೆ ಹೋಗುತ್ತಾರೆ ಎಂಬುದು ಗೊತ್ತಾಗಿದೆ.

ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರ ಆರೋಗ್ಯದ ಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ನ್ಯಾಯಾಧೀಶರು ಅವರಿಗೆ ಎಲ್ಲಿ ಚಿಕಿತ್ಸೆ ನೀಡುತ್ತೀರಿ ಎಂದು ವಿವರಣೆ ಕೇಳಿದ್ದಾರೆ. ಇದಕ್ಕೆ ದರ್ಶನ್ ಪರ ವಕೀಲರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದಾಗಿ ಹೇಳಿದ್ದಾರೆ.

ಹೀಗಾಗಿ ಷರತ್ತಿನ ಮೇಲೆ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುವಷ್ಟು ದಿನ ಮಾತ್ರ ಜಾಮೀನು ಸಿಗುವ ಸಾಧ್ಯತೆಯಿದೆ. ಇದರಿಂದಾಗಿ ಜಾಮೀನು ಸಿಕ್ಕ ತಕ್ಷಣ ದರ್ಶನ್ ನೇರವಾಗಿ ಮೈಸೂರಿಗೆ ಹೋಗಬಹುದು. ಆದರೆ ಅವರಿಗೆ ಬೆಂಗಳೂರಿಗೆ ತೆರಳಲು ನಿರ್ಬಂಧ ಹೇರುವ ಸಾಧ್ಯತೆಯಿದೆ.

ಚಿಕಿತ್ಸೆಗಾಗಿ ಅಷ್ಟೇ ಜಾಮೀನು ಸಿಕ್ಕರೆ ಅವರ ಗುಣಮುಖರಾದ ಬಳಿಕ ಮತ್ತೆ ಕೋರ್ಟ್ ಗೆ ಶರಣಾಗಬೇಕಾಗುತ್ತದೆ. ಅದಾದ ಬಳಿಕ ಅವರು ಬೆಂಗಳೂರಿನ ಜೈಲಿಗೆ ಶಿಫ್ಟ್ ಆಗಲು ಮನವಿ ಮಾಡುವ ಸಾಧ್ಯತೆಯಿದೆ. ಅಥವಾ ಆರೋಗ್ಯದ ನೆಪದಲ್ಲಿ ಮತ್ತಷ್ಟು ದಿನ ಜಾಮೀನು ವಿಸ್ತರಿಸುವ ಸಾಧ್ಯತೆಯೂ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಾಮೀನು ಸಿಗುತ್ತೆ ಅಂತ ಚಾತಕಪಕ್ಷಿಯಂತೆ ಕಾದಿರುವ ದರ್ಶನ್: ಡಿಬಾಸ್ ಸ್ವಾಗತಕ್ಕೆ ಫ್ಯಾನ್ಸ್ ಸಜ್ಜು