ಜನಪ್ರಿಯತೆ ನೆತ್ತಿಗೇರಿ ದರ್ಶನ್‌ ದಾರಿ ತಪ್ಪಿದ್ದು: ನಟಿ ರಮ್ಯಾ ಆಕ್ರೋಶ

sampriya
ಶನಿವಾರ, 15 ಜೂನ್ 2024 (15:08 IST)
Photo By X

ನವದೆಹಲಿ: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ ವಿರುದ್ಧ ಕಿಡಿಕಾರಿದ್ದ ನಟಿ ರಮ್ಯಾ ಅವರು ಇದೀಗ ಅವರ ಅಭಿಮಾನಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮಾಧ್ಯಮವೊಂದಕ್ಕೆ ದರ್ಶನ್‌ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ರಮ್ಯಾ ಅವರು, ದರ್ಶನ್‌ಗೆ ದೊಡ್ಡ ಅಭಿಮಾನಿಗಳ ಬಳಗವಿದೆ ಎಂದು ಬಿಂಬಿಸಲಾಗಿದೆ ಹೊರತು ಅವರಿಗೆ ಅಷ್ಟೊಂದು ಅಭಿಮಾನಿಗಳಲಿಲ್ಲ.  ಆತನಿಗೆ ಸಿಕ್ಕಿರುವ ಜನಪ್ರಿಯತೆ ನೆತ್ತಿಗೇರಿದ್ದರಿಂದ ಈ ರೀತಿಯ ಅಪರಾಧ ಪ್ರಕರಣಗಳು ನಡೆಯುತ್ತಿರುವುದಕ್ಕೆ ಸಾಕ್ಷಿ ಎಂದರು.

ಈ ಹಿಂದೆಯೂ ಅಪರಾಧ ಕೃತ್ಯಗಳಲ್ಲಿ ದರ್ಶನ್‌ ತೊಡಗಿಸಿಕೊಂಡಿದ್ದರಿಂದ ಪದೇ ಪದೇ ಅಪರಾಧ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇನ್ನೂ ದರ್ಶನ್‌ ಅಭಿಮಾನಿ ಬಳಗದ ಬಗ್ಗೆ ಮಾತನಾಡಿದ ಅವರು, ‘ಕಳೆದ ಚುನಾವಣೆಯಲ್ಲಿ ಒಂದೆರಡು ಅಭ್ಯರ್ಥಿಗಳ ಪರ ದರ್ಶನ್ ಪ್ರಚಾರ ಮಾಡಿದ್ದರು, ಅವರೆಲ್ಲರೂ ಚುನಾವಣೆಯಲ್ಲಿ ಸೋತಿದ್ದರು. ದರ್ಶನ್ ಅಭಿಮಾನಿಗಳ ಬಳಗದ ಕುರಿತಂತೆ ಹೈಪ್ ಮಾಡಲಾಗುತ್ತಿದೆ. ಪೊಲೀಸ್ ಠಾಣೆಯ ಮುಂದೆ ಜನ ನಿಂತಿದ್ದಾರೆ ಎಂದ ಮಾತ್ರಕ್ಕೆ ಆತ ಅಷ್ಟು ಪ್ರಭಾವ ಹೊಂದಿದ್ದಾನೆ ಎಂದು ಹೇಳಲು ಆಗುವುದಿಲ್ಲ’ ಎಂದು ಹೇಳಿದರು.

‘ಇನ್ನೂ ದರ್ಶನ್‌ ಸುತ್ತಮುತ್ತ ಇರುವವರಲ್ಲಿ ಹೆಚ್ಚಿನವರು ನಟೋರಿಯಸ್‌ ರೌಡಿಗಳ ಗುಣಗಳನ್ನು ಹೊಂದಿದ್ದು, ಅದರಿಂದಲೇ ದರ್ಶನ್ ಗಮನ ಸೆಳೆಯುತ್ತಿದ್ದಾರೆ’ ಎಂದರು.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ದರ್ಶನ್‌ಗೆ ಬಿಗ್‌ ಶಾಕ್, ಮನೆಯಲ್ಲಿ ಪತ್ತೆಯಾಗಿದ್ದ ₹82 ಲಕ್ಷ ಹಣ ಸದ್ಯ ಕೊಡಕ್ಕಾಗಲ್ಲ ಎಂದ ಕೋರ್ಟ್‌

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ಮುಂದಿನ ಸುದ್ದಿ
Show comments