Webdunia - Bharat's app for daily news and videos

Install App

ದರ್ಶನ್‌ನನ್ನು ಶಿಷ್ಯವೆಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ: ಅಡ್ಡಂಡ ಕಾರ್ಯಪ್ಪ

Sampriya
ಶನಿವಾರ, 15 ಜೂನ್ 2024 (14:28 IST)
Photo Courtesy X
ಮೈಸೂರು: ನಟ ದರ್ಶನ್‌ಗೆ ಒಳ್ಳೆಯ ಹೆಂಡತಿ, ಸುಂದರವಾದ ಮಗ ಇದ್ದಾರೆ. ಆ ನಟನ ಬಾಳಿನಲ್ಲಿ ಪವಿತ್ರಾಗೌಡ ಶನಿಯಂತೆ ಬಂದಳು. ಈಗ ದರ್ಶನ್ ಬದುಕು ಕೈ ಚೆಲ್ಲಿದ್ದಾನೆ. ಕಲೆಯಲ್ಲಿ ಉತ್ತುಂಗಕ್ಕೆ ಏರಿದ್ದ, ಆತನನ್ನು ನನ್ನ ಶಿಷ್ಯ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ದರ್ಶನ್‌ಗೆ ನಟನೆ ಕಲಿಸಿ ಕೊಟ್ಟ ಗುರು ಅಡ್ಡಂಡ ಕಾರ್ಯಪ್ಪ. 1987ರಲ್ಲಿ ನೀನಾಸಂ ನಲ್ಲಿ ದರ್ಶನ್‌ಗೆ ಕಲೆಯನ್ನು ಕಾರ್ಯಪ್ಪ ಹೇಳಿಕೊಟ್ಟ ಮೊದಲ ಗುರುವಾಗಿದ್ದರು. ಕೊಲೆ ಪ್ರಕರಣದಲ್ಲಿ ದರ್ಶನ್‌ ಸಿಲುಕಿಕೊಂಡಿರುವ ಬಗ್ಗೆ ಅವರು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

ದರ್ಶನ್ ಆಗ 7ನೇ ತರಗತಿಯಲ್ಲಿದ್ದ. 7ನೇ ತರಗತಿಗೆ 10ನೇ ತರಗತಿಯವರ ರೀತಿ ಕಾಣುತ್ತಿದ್ದ. ನಮ್ಮ ನಾಟಕದಲ್ಲಿ ದರ್ಶನ್‌ಗೆ ರಾಜನ ಪಾತ್ರ ಕೊಟ್ಟಿದ್ದೆ. ತುಂಬಾ ಚೆನ್ನಾಗಿ
ಅಭಿನಯಿಸಿದ್ದ. ನನ್ನ ಹೆಂಡತಿಯೇ ದರ್ಶನ್‌ಗೆ ಬಣ್ಣ ಹಚ್ಚಿದ್ದಳು. ಇದಾದ ಬಳಿಕ ಇವರ ಮೊದಲ ಸಿನಿಮಾ ನನಗೆ ಇಷ್ಟವಾಗಲಿಲ್ಲ. ಮತ್ತೊಮ್ಮೆ ಭೇಟಿಯಾದ ಸಂದರ್ಭ ನೀನಾಸಂಗೆ ಹೋಗುವಂತೆ ಪತ್ರ ಕೊಟ್ಟೆ. ಕಲಾವಿದನಾಗಿರುವ ನಾನು ಬೇರೊಬ್ಬ ಕಲಾವಿದನನ್ನು ಬೆಳೆಸುವುದು ನನ್ನ ಜವಾಬ್ದಾರಿ. ಮಂಡ್ಯ ರಮೇಶ್ ಕೂಡ ಒಂದು ಪತ್ರ ಕೊಟ್ಟರು. ಇದಾದ ಬಳಿಕ ದರ್ಶನ್ ಹೆಗ್ಗೋಡುನಲ್ಲಿರುವ ನೀನಾಸಂನಲ್ಲಿ ತರಬೇತಿ ಪಡೆದುಕೊಂಡ ಎಂದು ಹೇಳಿದರು.

ದರ್ಶನ್‌ಗೆ ಸಂಸ್ಕಾರ ಇಲ್ಲದ ಕಾರಣ ಆತನಿಗೆ ಈ ಪರಿಸ್ಥಿತಿ ಬಂದಿದೆ. ಪವಿತ್ರಾ ಗೌಡ ಆತನ ಪಾಲಿಗೆ ಶನಿ ಆಗಿದ್ದಾಳೆ. ಯಶಸ್ಸು ಎಂಬುದು ದರ್ಶನ್ ಒಳಗೆ ಅಹಂ ಬೆಳೆಸಿತು. ಸಿನಿಮಾದಲ್ಲಿ ಮಾಡುವ ಪಾತ್ರವನ್ನು ನಿಜ ಜೀವನದಲ್ಲಿ ಮಾಡೋಕೆ ಹೋಗಿ ಈಗ ಜೈಲು ಸೇರಿದ್ದಾನೆ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments