Select Your Language

Notifications

webdunia
webdunia
webdunia
webdunia

ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧೆಗೆ ಬಯಸಿದ್ದ ದರ್ಶನ್: ಯೋಗೇಶ್ವರ ಸ್ಪೋಟಕ ಹೇಳಿಕೆ

C.P. Yogeshwar

Sampriya

ರಾಮನಗರ , ಶುಕ್ರವಾರ, 14 ಜೂನ್ 2024 (15:23 IST)
Photo Courtesy X
ರಾಮನಗರ: ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ನಟ ದರ್ಶನ್‌ ಅವರನ್ನು ಕಾಂಗ್ರೆಸ್‌ನಿಂದ ನಿಲ್ಲಿಸಲು ಡಿ.ಕೆ. ಸಹೋದರರು ಸಿದ್ಧತೆ ನಡೆಸಿದ್ದರು ಎಂದು ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್‌ನಿಂದ ಅಚ್ಚರಿ ಅಭ್ಯರ್ಥಿ ಹಾಕ್ತೇವೆ ಎಂದಿದ್ದ ಡಿ.ಕೆ. ಸುರೇಶ್ ಹೇಳಿಕೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್‌ನವರ ಅಚ್ಚರಿ ಅಭ್ಯರ್ಥಿ ಇದೀಗ ಜೈಲುಪಾಲಾಗಿದ್ದಾರೆ. ಚಿತ್ರನಟರೊಬ್ಬರು ಕಾಂಗ್ರೆಸ್ ಪರವಾಗಿ ಹೆಚ್ಚು ಪ್ರಚಾರ ಮಾಡಿದ್ದರು. ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ಚುನಾವಣೆಗೆ ನಿಲ್ಲಿಸಲು ಡಿ.ಕೆ. ಸಹೋದರರು ಪ್ಲ್ಯಾನ್‌ ಮಾಡಿದ್ದರು ಎಂದರು.

ಆ ವ್ಯಕ್ತಿ ಯಾರು ಅಂತ ನೀವೇ ಊಹೆ ಮಾಡಿಕೊಳ್ಳಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ದರ್ಶನ್‌‌ ಸ್ಪರ್ಧೆಗೆ ಬಯಸಿದ್ದರು ಅನ್ನೋ ಸುಳಿವು ಬಿಟ್ಟುಕೊಟ್ಟಿದ್ದಾರೆ.

ದರ್ಶನ್ ಮೇಲೆ ಕೊಲೆ ಆರೋಪ ಕುರಿತು ಮಾತನಾಡಿ, ಈ‌ ವಿಚಾರವನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಇದೊಂದು ವಿಚಿತ್ರ ಕೇಸ್ ಎನಿಸುತ್ತಿದೆ. ಪಾಪ ಅವರಿಗೆ ರಾಜಕೀಯಕ್ಕೆ ಬರಬೇಕು ಅಂತ ಆಸೆ ಇತ್ತೇನೋ. ಆದರೆ ಈ ರೀತಿ ಅನಾಹುತ ಆಗೋಗಿದೆ. ಮುಂದೆ ಏನಾಗುತ್ತೋ ನೋಡೊಣ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೃಷಿ ಇಲಾಖೆ ರಾಯಭಾರಿ ಸ್ಥಾನದಿಂದ ದರ್ಶನ್‌ಗೆ ಕೊಕ್‌: ಎಂ.ಬಿ. ಪಾಟೀಲ್‌