Select Your Language

Notifications

webdunia
webdunia
webdunia
webdunia

ಮಧ್ಯರಾತ್ರಿ ದರ್ಶನ್‌ ಕರೆದೊಯ್ದು ಮನೆಯ ಮೂಲೆ ಮೂಲೆಯಲ್ಲೂ ಸಾಕ್ಷಿ ಹುಡುಕಿದ ಪೊಲೀಸರು

ಮಧ್ಯರಾತ್ರಿ ದರ್ಶನ್‌ ಕರೆದೊಯ್ದು ಮನೆಯ ಮೂಲೆ ಮೂಲೆಯಲ್ಲೂ ಸಾಕ್ಷಿ ಹುಡುಕಿದ ಪೊಲೀಸರು

sampriya

ಬೆಂಗಳೂರು , ಭಾನುವಾರ, 16 ಜೂನ್ 2024 (10:43 IST)
ಬೆಂಗಳೂರು: ನಿನ್ನೆ ಮಧ್ಯರಾತ್ರಿ ನಟ ದರ್ಶನ್‌ ಅವರನ್ನು ಭದ್ರತೆಯಲ್ಲಿ ಕರೆದೊಯ್ದು ಅವರ ಮನೆಯಲ್ಲಿ ಸಾಕ್ಷಿಗಾಗಿ ಪೊಲೀಸರು ಮಹಜರು ನಡೆಸಿದರು.

ರಾಜರಾಜೇಶ್ವರಿ ನಗರ ಐಡಿಯಲ್‌ ಹೋಮ್‌ ಟೌನ್‌ಶಿಪ್‌ನಲ್ಲಿ ಇರುವ ದರ್ಶನ್‌ ಅವರ ಮನೆಯಲ್ಲಿ ಶುಕ್ರವಾರ ಮಧ್ಯರಾತ್ರಿ ಪೊಲೀಸರು ಮಹಜರು ನಡೆಸಿದರು.

ಈ ಸಂಬಂಧ ಪೊಲೀಸರೊಬ್ಬರು ಮಾತನಾಡಿ,  ಇನ್ನೂ ರೇಣುಕಸ್ವಾಮಿ ಹತ್ಯೆ ಬಳಿಕ ನಟ ದರ್ಶನ್‌ ಅವರು ನೇರವಾಗಿ ತಮ್ಮ ಮನೆಗೆ ಬಂದಿದ್ದರು. ಬಳಿಕ ಸ್ನಾನ ಮಾಡಿದ್ದರು. ಇನ್ನೂ ಈ ಪ್ರಕರಣದಲ್ಲಿ ನಟ ದರ್ಶನ್‌ ಅವರು ರೇಣುಕಸ್ವಾಮಿ ಮೇಲೆ ಹಲ್ಲೆ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಸಾಕ್ಷ್ಯ ಗಳನ್ನು ಕಲೆ ಹಾಕಲಾಗಿದೆ. ದರ್ಶನ್‌ ಕೃತ್ಯ ನಡೆದ ದಿನ ಧರಿಸಿದ್ದ ಬಟ್ಟೆಗಳು ಸೇರಿದಂತೆ ಕೆಲವು ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಸಿ.ಸಿ. ಟಿ.ವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗೂ, ಅಂದು ದರ್ಶನ್‌ ಧರಿಸಿದ್ದ ಬಟ್ಟೆಗೂ ಹೋಲಿಕೆ ಮಾಡಲಾಗುವುದು ಎಂದರು.

ಇನ್ನೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಗುವ ಸಣ್ಣಪುಟ್ಟ ಸಾಕ್ಷ್ಯವನ್ನೂ ಕಲೆ ಹಾಕುತ್ತಿದ್ದೇವೆ. ಇನ್ನೂ ಸಾಕ್ಷ್ಯಗಳನ್ನು ಕಲೆ ಹಾಕುತಿದ್ದೇವೆ. ಇನ್ನೂ ದರ್ಶನ್‌ ಅವರನ್ನು ಸ್ಥಳ ಮಹಜರಿಗೆ ಅವರ ಮನೆಗೆ ಕರೆತರುವ ವಿಚಾರ ತಿಳಿದರೆ ಅವರ ಅಭಿಮಾಣಿಗಳಯ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಕಾರಣ ಮಧ್ಯರಾತ್ರಿ ದರ್ಶನ್‌ ಅವರನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದೇವೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್‌ ತಂಗಿದ್ದ ಮೈಸೂರು ಹೊಟೇಲ್‌ನಲ್ಲಿ ಸ್ಥಳ ಮಹಜರು ಸಾಧ್ಯತೆ