Publish Date: Thu, 13 Jun 2024 (20:46 IST)
Updated Date: Thu, 13 Jun 2024 (20:51 IST)
ಬೆಂಗಳೂರು: ಚಿತ್ರದುರ್ಗಾ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ 24 ಗಂಟೆಗಳ ಬಳಿಕ ನನಗೆ ತಿಳಿದಿದ್ದು, ಈ ಬಗ್ಗೆ ನನ್ನ ಜತೆ ಯಾರೂ ಚರ್ಚಿಸಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ನಗರದ ವಿಕಾಸ ಸೌಧದಲ್ಲಿ ಇಂದು ನಡೆದ ಜಲಸಂಪನ್ಮೂಲ ಸಭೆಯಲ್ಲಿ ಮಾತನಾಡಿದರು. ಈ ವೇಳೆ ಅವರು ಆರೋಪಿ ನಟ ದರ್ಶನ್ ಇರಿಸಿರುವ ಠಾಣೆಗೆ ಶಾಮಿಯಾನ ಹಾಕಿರುವ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದರು.
ಈ ವೇಳೆ ಅವರು ತಮ್ಮ ಜೈಲಿನ ಅನುಭವವನ್ನು ಹೇಳಿಕೊಂಡರು. ನನ್ನನ್ನೂ ಸ್ಟೇಷನ್‌ಗೆ, ಕೋರ್ಟ್‌ಗೆ ಕರೆದುಕೊಂಡು ಹೋಗಬೇಕಾದರೆ ಪೊಲೀಸರು ಮರೆಮಾಚಿ ಕರೆದುಕೊಂಡು ಹೋಗ್ತಿದ್ರು ಅಂತ ಹಳೆಯ ನೆನಪೊಂದನ್ನು ಮೆಲುಕು ಹಾಕಿದ್ದಾರೆ.
ಇದಕ್ಕೂ ಮುನ್ನ ದರ್ಶನ್ ಅರೆಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದರು. ದರ್ಶನ್ ಕೇಸ್ ಮುಚ್ಚಿಹಾಕುವ ವಿಚಾರದಲ್ಲಿ ತಮ್ಮನ್ನು ಸಂಪರ್ಕ ಮಾಡಿದ್ರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಬಳಿ ಮಾತು-ಕತೆ ಆಡಿಲ್ಲ. ನನ್ನ ಜೊತೆಗೆ ಸಂಪರ್ಕವೂ ಇರಲಿಲ್ಲ. ಕೇಸ್ ಆಗಿ 24 ಗಂಟೆ ಆದ್ಮೇಲೆ ನನಗೆ ಗೊತ್ತಾಯ್ತು ಎಂದು ಹೇಳಿದ್ದಾರೆ.