Select Your Language

Notifications

webdunia
webdunia
webdunia
webdunia

ದರ್ಶನ್‌ರನ್ನು ರಕ್ಷಿಸುವ ಪ್ರಮೇಯವೆ ಇಲ್ಲ, ಫಿಲ್ಮ್‌ ಚೇಂಬರ್‌

darshan

sampriya

ಬೆಂಗಳೂರು , ಗುರುವಾರ, 13 ಜೂನ್ 2024 (20:23 IST)
Photo By X

ಬೆಂಗಳೂರು: ನಟ ದರ್ಶನ್‌ ಅವರನ್ನು ಚಿತ್ರರಂಗದಿಂದ ಬ್ಯಾನ್‌ ಮಾಡುವ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಕರ್ನಾಟಕ ಫಿಲ್ಮ್ ಚೇಂಬರ್ ತುರ್ತುಸಭೆ ನಿರ್ಧರಿಸಲಾಯಿತು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಎ 2 ಆರೋಪಿಯಾಗಿರುವ ದರ್ಶನ್‌ ಅವರನ್ನು ಬ್ಯಾನ್‌ ಮಾಡಬೇಕೆಂಬ ಒತ್ತಾಯದ ಬೆನ್ನಲ್ಲೇ ಕರ್ನಾಟಕ ಫಿಲ್ಮ್‌ ಚೇಂಬರ್‌ ತುರ್ತುಸಭೆ ನಡೆಸಿತು.

ಫಿಲ್ಮ್‌ ಚೇಂಬರ್‌ ಅಧ್ಯಕ್ಷ ಎನ್‌ ಎಂ ಸುರೇಶ್‌ ಮಾತನಾಡಿ,  ಕೊಲೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಅಲ್ಲದೆ ದರ್ಶನ್​ ಅವರನ್ನು ರಕ್ಷಿಸುವ ಪ್ರಮೇಯವೆ ಇಲ್ಲ. ಕೊಲೆ ಎಂಬುದು ತುಂಬಾ ಸೂಕ್ಷ್ಮ ವಿಚಾರವಾಗಿದೆ. ಕಾನೂನಿನಡಿ ಪೊಲೀಸರು ತನಿಖೆ ನಡೆಸುತ್ತಿದ್ದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದರು.

ದರ್ಶನ್ ಕನ್ನಡ ಚಿತ್ರರಂಗದ ದೊಡ್ಡ ನಟ. ಬಹಿಷ್ಕಾರ ಕುರಿತಂತೆ ಸದ್ಯಕ್ಕೆ ಯಾವುದೇ ನಿರ್ಧಾರಕೈಗೊಂಡಿಲ್ಲ. ಆದರೆ ದರ್ಶನ್ ಎಸಗಿರುವ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾತ್ರ ಈ ಕೊಲೆಯನ್ನು ಖಂಡಿಸುತ್ತದೆ. ಅದಲ್ಲದೆ ನಾವು ಮೃತನ ಕುಟುಂಬಸ್ಥರ ಪರವಾಗಿ ನಿಂತಿದ್ದು, ಅದರಂತೆ ನಾಳೆ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳುತ್ತೇವೆ ಎಂದರು.




Share this Story:

Follow Webdunia kannada

ಮುಂದಿನ ಸುದ್ದಿ

ಕೆಟ್ಟ ಕಮೆಂಟ್ ಗೆ ಮನನೊಂದು ಇನ್‌ಸ್ಟಾಗ್ರಾಂ ಖಾತೆಯನ್ನೇ ಡಿಲೀಟ್ ಮಾಡಿದ ದರ್ಶನ್ ಪತ್ನಿ