Select Your Language

Notifications

webdunia
webdunia
webdunia
webdunia

ಕೆಜಿಎಫ್ ಸಿನಿಮಾ ಡೈಲಾಗ್ ಗಳಿಗೆ ಯಜಮಾನದಲ್ಲಿ ತಿರುಗೇಟು ಕೊಟ್ಟರಾ ದರ್ಶನ್?!

ಕೆಜಿಎಫ್ ಸಿನಿಮಾ ಡೈಲಾಗ್ ಗಳಿಗೆ ಯಜಮಾನದಲ್ಲಿ ತಿರುಗೇಟು ಕೊಟ್ಟರಾ ದರ್ಶನ್?!
ಬೆಂಗಳೂರು , ಭಾನುವಾರ, 3 ಮಾರ್ಚ್ 2019 (09:29 IST)
ಬೆಂಗಳೂರು: ಸಿನಿಮಾ ರಂಗ ಯಾರಪ್ಪನ ಸೊತ್ತೂ ಅಲ್ಲ. ಇಲ್ಲಿ ಎಲ್ಲರಿಗೂ ಬೆಳೆಯುವ ಹಕ್ಕಿದೆ ಎಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಜಮಾನ ಸಿನಿಮಾದಲ್ಲಿ ಹೇಳಿದ ಕೆಲವು ಡೈಲಾಗ್ ಗಳು ಕೆಜಿಎಫ್ ಸಿನಿಮಾಗೆ ಕೌಂಟರ್ ಕೊಟ್ಟಂತಿದೆ ಎಂದು ಅಭಿಮಾನಿಗಳೇ ಮಾತಾಡುತ್ತಿದ್ದಾರೆ.


ಯಜಮಾನ ಸಿನಿಮಾದಲ್ಲಿ ಮೊದಲಾರ್ಧದಲ್ಲಿ ಬಿಲ್ಡಪ್ ಜಾಸ್ತಿಯಾಯಿತು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದೇ ಪ್ರೇಕ್ಷಕರು ಈ ಸಿನಿಮಾದಲ್ಲಿ ದರ್ಶನ್ ಬಾಯಲ್ಲಿ ಬರುವ ಕೆಲವು ಡೈಲಾಗ್ ಗಳು ಕೆಜಿಎಫ್ ಸಿನಿಮಾದಲ್ಲಿ ಯಶ್ ಹೇಳಿದ ಡೈಲಾಗ್ ಗಳಿಗೆ ತಿರುಗೇಟು ಕೊಟ್ಟಂತಿದೆ ಎನ್ನುತ್ತಿದ್ದಾರೆ.

ನಾನು ಡೈಲಾಗ್ ವಾರ್ ಮಾಡಲು ಇಷ್ಟಪಡಲ್ಲ ಎನ್ನುವ ದರ್ಶನ್ ತಮ್ಮ ಸಿನಿಮಾದಲ್ಲಿ ಮತ್ತೆ ಅದನ್ನೇ ಮಾಡಿದ್ದಾರೆ ಎಂದು ಟ್ವಿಟರಿಗರು ಬೇಸರಿಸಿಕೊಂಡಿದ್ದಾರೆ.  ಅದೇನೇ ಇದ್ದರೂ ವರ್ಷಗಳ ಗ್ಯಾಪ್ ಬಳಿಕ ದರ್ಶನ್ ಮಾಡಿರುವ ಸಿನಿಮಾವೊಂದು ಎಲ್ಲಾ ವರ್ಗದ ಜನರಿಗೆ ಮನರಂಜನೆ ಒದಗಿಸುವ ಪಕ್ಕಾ ಡಿ ಬಾಸ್  ಶೈಲಿ ಸಿನಿಮಾ ಎಂದು ಅಭಿಮಾನಿಗಳು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ನಟನ ಬಿಟ್ಟು ಇನ್ಯಾರಿಗೂ ಕಿಸ್ ಮಾಡಲ್ಲ ಎಂದ ತಮನ್ನಾ ಭಾಟಿಯಾ