Publish Date: Thu, 05 Mar 2020 (10:18 IST)
Updated Date: Thu, 05 Mar 2020 (10:20 IST)
ಬೆಂಗಳೂರು: ಅನಾರೋಗ್ಯದಿಂದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಚೇತರಿಸಿಕೊಂಡ ಬಳಿಕ ಬಿಡುಗಡೆಯಾಗಿದ್ದಾರೆ.
ನಿನ್ನೆ ರಾತ್ರಿ ದಿಡೀರ್ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ದರ್ಶನ್ ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಹೊರ ಬಂದ ಬಳಿಕ ಮಾಧ್ಯಮಗಳೊಂದಿಗೆ ದರ್ಶನ್ ಮಾತನಾಡಿದ್ದಾರೆ.
‘ನಾನು ಆರಾಮವಾಗಿದ್ದೇನೆ. ಸ್ವಲ್ಪ ಗ್ಯಾಸ್ಟ್ರಿಕ್ ಸಮಸ್ಯೆ ಆಗಿತ್ತಷ್ಟೆ. ಆರೋಗ್ಯ ಕಡೆಗೆ ಗಮನ ಕೊಡಲು ಸಮಯ ಸಿಗಲಿಲ್ಲ. ನಮ್ಮ ಕೆಲಸಾನೇ ಹಾಗೇ ಅಲ್ವಾ?’ ಎಂದು ದರ್ಶನ್ ಹೇಳಿಕೊಂಡಿದ್ದಾರೆ.