Select Your Language

Notifications

webdunia
webdunia
webdunia
webdunia

ಜೈಲಿನಲ್ಲಿರುವಾಗಲೂ ದರ್ಶನ್ ಗೊಂದು ಸಿಹಿ ಸುದ್ದಿ

Darshan

Krishnaveni K

ಬೆಂಗಳೂರು , ಬುಧವಾರ, 17 ಜುಲೈ 2024 (10:52 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವಾಗಲೂ ನಟ ದರ್ಶನ್ ಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅವರ ಅಭಿಮಾನಿಗಳೂ ಈ ಸುದ್ದಿಗೆ ಖುಷಿಪಡಬಹುದು.

ಅದೇನೆಂದರೆ 69 ನೇ ಫಿಲಂ ಫೇರ್ ಅವಾರ್ಡ್ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾ ಹಲವು ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಸ್ವತಃ ದರ್ಶನ್ ಕೂಡಾ ಬೆಸ್ಟ್ ಆಕ್ಟರ್ ಅವಾರ್ಡ್ ಗೆ ನಾಮ ನಿರ್ದೇಶನಗೊಂಡಿದ್ದಾರೆ. ಕಾಟೇರ ಕಳೆದ ವರ್ಷ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿದ್ದ ಸೂಪರ್ ಹಿಟ್ ಸಿನಿಮಾವಾಗಿತ್ತು.

69 ನೇ ಫಿಲಂ ಫೇರ್ ಅವಾರ್ಡ್ ನಲ್ಲಿ ಅತ್ಯುತ್ತಮ ನಟ, ನಿರ್ದೇಶಕ, ಅತ್ಯುತ್ತಮ ಸಿನಿಮಾ, ಸಂಗೀತ ನಿರ್ದೇಶನ, ಹಾಡು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ. ನಿರ್ದೇಶಕರಾಗಿ ತರುಣ್ ಸುಧೀರ್, ಸಂಗೀತ ನಿರ್ದೇಶನಕ್ಕೆ ವಿ ಹರಿಕೃಷ್ಣ ನಾಮನಿರ್ದೇಶನಗೊಂಡಿದ್ದಾರೆ.

ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ ಹಿಟ್ ಸಿನಿಮಾಗಳಿಲ್ಲದೇ ಚಿತ್ರರಂಗ ಖಾಲಿ ಹೊಡೆಯುತ್ತಿತ್ತು. ಈ ವೇಳೆ ದರ್ಶನ್ ನಾಯಕರಾಗಿದ್ದ ಕಾಟೇರ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡಿತ್ತು. ಇದು ಚಿತ್ರರಂಗಕ್ಕೆ ಚೇತರಿಕೆ ಕಂಡಿತ್ತು. ದರ್ಶನ್ ಸಿನಿಮಾಗಳ ಪೈಕಿ ಈ ಸಿನಿಮಾ ವಿಭಿನ್ನವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಸೆಲ್ಫೀ ಕೇಳಿಕೊಂಡು ಬಂದ ಸ್ವಚ್ಛತಾ ಕಾರ್ಮಿಕರ ಜೊತೆ ನಟಿ ರೋಜಾ ಈ ರೀತಿ ನಡೆದುಕೊಳ್ಳೋದಾ (ವಿಡಿಯೋ)