Webdunia - Bharat's app for daily news and videos

Install App

ಹೆಂಡತಿ ಮಕ್ಕಳೇ ಮುಖ್ಯ ಚೆನ್ನಾಗಿ ನೋಡ್ಕೊಳ್ಳಿ ಎಂದ ದರ್ಶನ್: ದಾಸನಿಗೆ ಕೆಟ್ಟ ಮೇಲೆ ಬುದ್ಧಿ ಬಂತಾ

Krishnaveni K
ಬುಧವಾರ, 24 ಜುಲೈ 2024 (09:56 IST)
ಬೆಂಗಳೂರು: ಗೆಳತಿ ಪವಿತ್ರಾ ಗೌಡಗಾಗಿ ರೇಣುಕಾಸ್ವಾಮಿ ಎಂಬಾತನನ್ನು ಹತ್ಯೆ ಮಾಡಿರುವ ಆಪಾದನೆಯಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಈಗ ಪಶ್ಚಾತ್ತಾಪವಾಗುತ್ತಿದೆ ಎನ್ನಲಾಗಿದೆ. ಜೈಲಿನಲ್ಲಿ ದರ್ಶನ್ ರನ್ನು ಭೇಟಿಮಾಡಿದ್ದ ಸಿದ್ಧರೂಢ ಎಂಬ ಅಭಿಮಾನಿ ಖಾಸಗಿ ವಾಹಿನಿಯೊಂದರಲ್ಲಿ ಈ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.

ಸಿದ್ಧರೂಢ ಎಂಬ ವ್ಯಕ್ತಿ 22 ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಈಗ ಸನ್ನಡತೆಯ ಆಧಾರದಲ್ಲಿ ಬಿಡುಗಡೆಯಾಗಿದ್ದಾರೆ. ಜೈಲಿನಲ್ಲಿದ್ದಾಗ ದರ್ಶನ್ ಭೇಟಿಯಾಗಲು ಅವರಿಗೆ ಅವಕಾಶ ಸಿಕ್ಕಿದೆ. ಈ ವೇಳೆ ದರ್ಶನ್ ಜೊತೆ ಕಳೆದ ಕ್ಷಣಗಳ ಬಗ್ಗೆ ಅವರು ಖಾಸಗಿ ವಾಹಿನಿಯಲ್ಲಿ ವಿವರಿಸಿದ್ದಾರೆ.

‘ದರ್ಶನ್ ಕಣ್ಣುಗಳನ್ನು ನೋಡಿದರೆ ಪಶ್ಚಾತ್ತಾಪವಿದೆ ಎನಿಸುತ್ತದೆ. ನನ್ನ  ಬಳಿ ನಿನಗೆ ಹೆಂಡತಿ ಮಕ್ಕಳಿದ್ದಾರಾ ಕೇಳಿದರು. ಇದ್ದರೆ ಅವರನ್ನು ಚೆನ್ನಾಗಿ ನೋಡಿಕೋ ಎಂದಿದ್ದಾರೆ’ ಎಂದು ಸಿದ್ಧರೂಢ ಹೇಳಿದ್ದಾರೆ. ಆ ಮೂಲಕ ಎಲ್ಲಕ್ಕಿಂತ ಕುಟುಂಬದವರೇ ಮುಖ್ಯ ಎನ್ನುವ ಪಾಠ ಕಲಿತಿದ್ದಾರೆ ಎನ್ನಬಹುದು.

ದರ್ಶನ್ ಈಗ ಜೈಲಿನಲ್ಲೂ ಪವಿತ್ರಾ ಗೌಡರನ್ನು ಭೇಟಿಯಾಗುವ ಅವಕಾಶ ಸಿಕ್ಕರೂ ಮಾತನಾಡಿಸುತ್ತಿಲ್ಲ ಎಂಬ ವರದಿಗಳಿವೆ. ಎಲ್ಲವೂ ಪವಿತ್ರಾಳಿಂದಲೇ ಆಗಿದ್ದು ಎನ್ನುವ ಸಿಟ್ಟು ದರ್ಶನ್ ಗಿದೆ. ಇತ್ತ ಪವಿತ್ರಾಗೂ ನನ್ನಿಂದಲೇ ದರ್ಶನ್ ಜೈಲಿಗೆ ಹೋಗುವಂತಾಯಿತು ಎನ್ನುವ ಬೇಸರವಿದೆ.

ಈ ನಡುವೆ ಇಷ್ಟೆಲ್ಲಾ ರಾಮಾಯಣ ನಡೆದರೂ ಪತ್ನಿ ವಿಜಯಲಕ್ಷ್ಮಿ ಮಾತ್ರ ಗಂಡನನ್ನು ಬಿಟ್ಟುಕೊಟ್ಟಿಲ್ಲ. ಗಂಡನಿಗಾಗಿ ಕೋರ್ಟ್ ನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಮಗ ವಿನೀಶ್, ತಾಯಿ ಮೀನಾ, ಸಹೋದರ ದಿನಕರ್ ಕೂಡಾ ಜೈಲಿಗೆ ಬಂದು ದರ್ಶನ್ ಭೇಟಿಯಾಗಿ ಹೋಗಿದ್ದಾರೆ. ಎಲ್ಲಾ ನೋಡಿದ ಮೇಲೆ ಕುಟುಂಬದವರ ಪ್ರಾಮುಖ್ಯತೆ ದರ್ಶನ್ ಗೆ ಅರ್ಥವಾಗಿದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿವೋರ್ಸ್ ವದಂತಿ ಬೆನ್ನಲ್ಲೇ ಗಣೇಶ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ನಟ ಗೋವಿಂದ ದಂಪತಿ

ಹುಂಡೈ ವಾಹನದಲ್ಲಿ ಪದೇ ಪದೇ ಸಮಸ್ಯೆ, ನಟ ಶಾರುಖ್‌, ದೀಪಿಕಾ ವಿರುದ್ಧ ಬಿತ್ತು ಕೇಸ್‌, ಯಾಕೆ ಗೊತ್ತಾ

ಗಣೇಶ ಹಬ್ಬಕ್ಕೆ ಈ ಬಾರಿಯೂ ಜೈಲಿನಲ್ಲೇ ದಾಸ : ಪತ್ನಿ ವಿಜಯಲಕ್ಷ್ಮಿ ಏನ್ ಮಾಡಿದ್ರೂ ಗೊತ್ತಾ

ಬರ್ತ್ ಡೇಗೆ ಮನೆ ಬಳಿ ಬರಬೇಡಿ ಎಂದಿಲ್ಲ ಕಿಚ್ಚ ಸುದೀಪ್: ಫ್ಯಾನ್ಸ್ ಗೆ ದೊಡ್ಡ ಸರ್ಪ್ರೈಸ್

ಮಡೆನೂರು ಮನು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೆ ಶಿವಣ್ಣ ಏನು ಮಾಡಿದ್ರು ವಿಡಿಯೋ ನೋಡಿ

ಮುಂದಿನ ಸುದ್ದಿ
Show comments