ಜೈಲಿಗೆ ಬಂದ ವಿಜಯಲಕ್ಷ್ಮಿ ತರುಣ್ ಸುಧೀರ್ ಮದುವೆ ಬಗ್ಗೆ ಹೇಳಿದ್ದಕ್ಕೆ ದರ್ಶನ್ ರಿಯಾಕ್ಷನ್ ಹೇಗಿತ್ತು

Krishnaveni K
ಮಂಗಳವಾರ, 13 ಆಗಸ್ಟ್ 2024 (10:36 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ರನ್ನು ನೋಡಲು ನಿನ್ನೆ ಪತ್ನಿ ವಿಜಯಲಕ್ಷ್ಮಿ ಬಂದಿದ್ದರು. ಈ ವೇಳೆ ತರುಣ್ ಸುಧೀರ್ ಮದುವೆ ವಿಚಾರವನ್ನು ವಿಜಯಲಕ್ಷ್ಮಿ ಹೇಳಿದ್ದಾರೆ.

ದರ್ಶನ್ ರನ್ನು ಭೇಟಿಯಾಗಲು ಬಂದ ವಿಜಯಲಕ್ಷ್ಮಿ ಹಣ್ಣು ಹಂಪಲುಗಳನ್ನು ತಂದು ಕೊಟ್ಟಿದ್ದಾರೆ. ಜೊತೆಗೆ ಪ್ರಕರಣದ ಬಗ್ಗೆ ಪತಿ ಜೊತೆ ಮಾತನಾಡಿರುವ ವಿಜಯಲಕ್ಷ್ಮಿ ಪತಿಗೆ ಧೈರ್ಯ ಹೇಳಿಬಂದಿದ್ದಾರೆ. ಈ ವೇಳೆ ದರ್ಶನ್ ಅಳಿಯ ಕೂಡಾ ಜೊತೆಗಿದ್ದರು. ದರ್ಶನ್ ನ್ಯಾಯಾಂಗ ಬಂಧನ ಅವಧಿ ನಾಳೆಗೆ ಮುಕ್ತಾಯವಾಗಲಿದ್ದು ಈ ಹಿನ್ನಲೆಯಲ್ಲಿ ವಿಜಯಲಕ್ಷ್ಮಿ ಭೇಟಿ ನೀಡಿ ಗಂಡನಿಗೆ ಧೈರ್ಯ ಹೇಳಿದ್ದಾರೆ.

ಇದರ ಜೊತೆಗೆ ವಿಜಯಲಕ್ಷ್ಮಿ ತರುಣ್ ಸುಧೀರ್ ಮತ್ತು ಸೋನಾಲ್ ಮದುವೆ ಬಗ್ಗೆ ದರ್ಶನ್ ಗೆ ವಿಜಯಲಕ್ಷ್ಮಿ ಮಾಹಿತಿ ನೀಡಿದ್ದಾರೆ. ಇದಕ್ಕೆ ದರ್ಶನ್ ಕೂಡಾ ಇಬ್ಬರಿಗೂ ಒಳ್ಳೆಯದಾಗಲಿ ಎಂದು ಹರಸಿದ್ದಾರೆ ಎನ್ನಲಾಗಿದೆ. ತರುಣ್ ಮತ್ತು ಸೋನಾಲ್ ಮದುವೆಗೆ ದರ್ಶನ್ ಅವರೇ ಮುಖ್ಯ ಕಾರಣ. ಆದರೆ ಇಬ್ಬರ ಮದುವೆಗೆ ದರ್ಶನ್ ರೇ ಇಲ್ಲ ಎನ್ನುವುದು ಎಲ್ಲರ ಬೇಸರಕ್ಕೆ ಕಾರಣವಾಗಿತ್ತು.

ಆದರೆ ಈಗ ನವ ವಿವಾಹಿತರಿಗೆ ದರ್ಶನ್ ಜೈಲಿನಿಂದಲೇ ಹಾರೈಸಿದ್ದಾರೆ. ಮದುವೆ ಬಳಿಕವೂ ಮಾಧ್ಯಮಗಳ ಜೊತೆ ಮಾತನಾಡುವಾಗ ತರುಣ್ ಮದುವೆಗೆ ದರ್ಶನ್ ಬರಲಾಗಲಿಲ್ಲ ಎಂಬ ಬೇಸರ ಹೊರಹಾಕಿದ್ದರು. ತಮ್ಮ ಮದುವೆ ಆಮಂತ್ರಣವನ್ನೂ ತರುಣ್ ಮೊದಲು ದರ್ಶನ್ ಗೇ ನೀಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕೇರಳ ರಾಜ್ಯ ಪ್ರಶಸ್ತಿ ಪುರಸ್ಕೃತ ಮಲಯಾಳಂ ನಟ ಅಖಿಲ್ ವಿಶ್ವನಾಥ್ ಅನುಮಾನಾಸ್ಪದ ಸಾವು

ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಮೊದಲ ದಿನವೇ 30 ಕೋಟಿ ಗಳಿಸಿದ್ದು ನಿಜಾನಾ

ಹೇಮಾ ಮಾಲಿನಿ ಚುನಾವಣೆಗೆ ನಿಂತಿದ್ದಾಗ ಧರ್ಮೇಂದ್ರರಿಂದ ಕರೆ ಬಂದಿತ್ತು: ಅಮಿತ್ ಶಾ ನೆನಪು

ದರ್ಶನ್ ರಾಜಕೀಯ ಎಂಟ್ರಿ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಹೋದರ ದಿನಕರ್‌

ದರ್ಶನ್ ಡೆವಿಲ್ ಮೂವಿ ರಿಲೀಸ್: ಪತಿ ಮಾಡಬೇಕಾದ ಕೆಲಸವನ್ನು ಮಗನ ಜೊತೆ ಮಾಡಿದ ವಿಜಯಲಕ್ಷ್ಮಿ

ಮುಂದಿನ ಸುದ್ದಿ
Show comments