ಅಣ್ಣಯ್ಯ ಧಾರವಾಹಿ ಮೂಲಕ ಹೀರೋ ಆಗಿ ಎಂಟ್ರಿಕೊಡುತ್ತಿರುವ ಈ ನಟ ಯಾರು ಗೊತ್ತಾ

Krishnaveni K
ಮಂಗಳವಾರ, 13 ಆಗಸ್ಟ್ 2024 (10:21 IST)
Photo Credit: Instagram
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಸದ್ಯದಲ್ಲೇ ಅಣ್ಣಯ್ಯ ಎನ್ನುವ ಸೆಂಟಿಮೆಂಟಲ್ ಧಾರವಾಹಿಯೊಂದು ಪ್ರಸಾರವಾಗಲಿದೆ. ಈಗಾಗಲೇ ಪ್ರೋಮೋ ಹರಿಯಬಿಡಲಾಗಿದ್ದು, ಈ ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ನಟ ಯಾರು ಎಂಬ ಬಗ್ಗೆ ಎಲ್ಲರಲ್ಲಿ ಕುತೂಹಲ ಶುರುವಾಗಿದೆ.

ಅಣ್ಣಯ್ಯ ಧಾರವಾಹಿಯ ಹೀರೋ ಅಣ್ಣಯ್ಯ ಪಾತ್ರ ಮಾಡಲಿರುವ ಸ್ಪುರದ್ರೂಪಿ ನಟನ ಹೆಸರು ವಿಕಾಸ್ ಉತ್ತಯ್ಯ. ಇವರು ಹುಟ್ಟಿಬೆಳೆದಿದ್ದು ಬೆಂಗಳೂರಿನಲ್ಲಿ. ಆದರೆ ಮೂಲತಃ ಕೊಡಗಿನವರು. ನಟನಾಗುವ ಮೊದಲು ಇವರು ಅಡ್ವೊಕೇಟ್ ಆಗಿದ್ದರು. ಆದರೆ ನಟನೆಯ ಮೇಲಿನ ಮೋಹದಿಂದ ವಕೀಲಿ ವೃತ್ತಿ ಬಿಟ್ಟು ಬಣ್ಣದ ಲೋಕಕ್ಕೆ ಬಂದಿದ್ದಾರೆ.

ಕನ್ನಡದಲ್ಲಿ ‘ಆನ’, ‘ಮೇರಿ’ ಎಂಬ ಸಿನಿಮಾಗಳಲ್ಲಿ ಪಾತ್ರ ಮಾಡಿದ್ದಾರೆ. ಆದರೆ ಯಾಕೋ ಈ ಹ್ಯಾಂಡ್ಸಮ್ ಹುಡುಗನಿಗೆ ಸಿನಿಮಾಗಳಲ್ಲಿ ಅದೃಷ್ಟ ಅಷ್ಟೊಂದು ಕೈ ಹಿಡಿಯಲಿಲ್ಲ. ಆದರೆ ಈಗ ಧಾರವಾಹಿ ಮೂಲಕ ಅದೃಷ್ಟ ಪರೀಕ್ಷೆಗಿಳಿಯಲು ಹೊರಟಿದ್ದಾರೆ.

ಜೀ ಕನ್ನಡದಲ್ಲಿ ಸದ್ಯದಲ್ಲೇ ಪ್ರಸಾರವಾಗಲಿರುವ ಅಣ್ಣಯ್ಯ ಧಾರವಾಹಿಯಲ್ಲಿ ವಿಕಾಸ್ ಉತ್ತಯ್ಯಗೆ ನಾಯಕಿಯಾಗುತ್ತಿರುವವರು ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್. ನಾಲ್ವರು ತಂಗಿಯಂದಿರ ಮುದ್ದಿನ ಅಣ್ಣನಾಗಿ, ಪಕ್ಕಾ ಹಳ್ಳಿ ಹೈದನಾಗಿ ವಿಕಾಸ್ ನಿಮ್ಮ ಮುಂದೆ ಸದ್ಯದಲ್ಲೇ ಬರಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟಿ ತ್ವಿಶಾ ಸಾವು ಪ್ರಕರಣದ ತನಿಖೆ: ಮಹತ್ವದ ಬೆಳವಣಿಗೆ

ಸುದೀಪ್ ಸೋದರಳಿಯನ ಮ್ಯಾಂಗೋ ಪಚ್ಚ ಸಿನಿಮಾ ಟ್ರೇಲರ್‌ಗೆ ರಿಷಬ್ ಶೆಟ್ಟಿ ಮೆಚ್ಚುಗೆ

ಹೊಸ ತಮಿಳು ಸಿನಿಮಾಗೆ ದಿನದಲ್ಲಿ ಐದು ಶೋ ಪ್ರದರ್ಶಿಸಲು ಸಿಎಂ ವಿಜಯ್ ಅನುಮತಿ

ಸಲ್ಮಾನ್ ಖಾನ್ ತೀರಾ ಖಾಸಗಿ ಕ್ಷಣ ಸೋಷಿಯಲ್ ಮೀಡಿಯಾದಲ್ಲಿ ಲೀಕ್: ತೀರಾ ಅತಿಯಾಯ್ತು ಎಂದ ಪಬ್ಲಿಕ್ Video

Video ಕಾಂತಾರ ವಿವಾದ: ಚಾಮುಂಡಿ ತಾಯಿ ಸನ್ನಿಧಿಗೆ ಬಂದು ತಲೆಬಾಗಿ ಕ್ಷಮೆ ಕೇಳಿದ ರಣವೀರ್ ಸಿಂಗ್

ಮುಂದಿನ ಸುದ್ದಿ
Show comments