Select Your Language

Notifications

webdunia
webdunia
webdunia
webdunia

'ರಾಘಣ್ಣ'ಗೆ ಆ್ಯಕ್ಷನ್ ಕಟ್ ಹೇಳುತ್ತಿರುವ 'ಪ್ರಥಮ್' ಹಿನ್ನೆಲೆ ಕೇಳಿ ಶಾಕ್ ಆದ 'ಶಿವಣ್ಣ'

Actor Pratham On Security Guard

Sampriya

ಬೆಂಗಳೂರು , ಸೋಮವಾರ, 12 ಆಗಸ್ಟ್ 2024 (20:16 IST)
Photo Courtesy X
ಬೆಂಗಳೂರು: ಇಂದು ರಾಘವೇಂದ್ರ ರಾಜ್‌ಕುಮಾರ್‌ ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ನಟ, ಬಿಗ್‌ಬಾಸ್ ಸ್ಪರ್ಧಿ ಪ್ರಥಮ್ ಅವರು  ಒಂದು ಕಾಲದಲ್ಲಿ ರಾಜ್‌ಕುಮಾರ್ ಹೊಟೇಲ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

ಸದ್ಯ ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಸ್ಪರ್ಧಿಯಾಗಿರುವ ಪ್ರಥಮ್ ಅವರು ಶಿವರಾಜ್‌ಕುಮಾರ್ ಮುಂದೆ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಶಿವರಾಜ್ ಕುಮಾರ್ ಅವರ ಗಾಂಧಿ ನಗರದಲ್ಲಿರುವ ರಾಜ್‌ಕುಮಾರ್‌ ಹೊಟೇಲ್‌ನಲ್ಲಿ ನಾನು ಒಂದು ಕಾಲದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದೆ.  ಆದರೆ ಇದೀಗ ರಾಘಣ್ಣಗೆ ನಾನು ನಿರ್ದೇಶನ ಮಾಡುತ್ತಿದ್ದೇನೆ.  ಈ ವಿಚಾರವನ್ನು ನಾನು ರಾಘಣ್ಣ ಹಾಗೂ ಗೀತಾಕ್ಕ ಜತೆ ಹೇಳಿಕೊಂಡಿದ್ದೆ. ಈ ವಿಚಾರವನ್ನು ಕೇಳಿ ಶಿವಣ್ಣ ಅಚ್ಚರಿಗೆ ಒಳಗಾಗಿದ್ದಾರೆ.

ಬಿಗ್‌ಬಾಸ್ ವಿನ್ನರ್ ಆಗಿರುವ ಪ್ರಥಮ್ ಅವರು ಸಿನಿಮಾದಲ್ಲಿ ನಟನಾಗಿ ಅಭಿನಯಿಸುತ್ತಿದ್ದಾರೆ. ಅದರೊಂದಿಗೆ ಇದೀಗ ಜೀ ಕನ್ನಡದಲ್ಲಿ ಶುರುವಾಗಿರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ. ಇವರಿಗೆ ಬೆಳ್ತಂಗಡಿಯ ತ್ರಿಷಾ ಜತೆ ಹೆಜ್ಜೆ ಹಾಕಿ, ಜಡ್ಜ್‌ಗಳ ಮನಸು ಕದಿಯುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಂಸದೆಯಾದ ಬಳಿಕ ಕಂಗನಾ ರನೌತ್ ಮೊದಲ ಸಿನಿಮಾದ ಬಗ್ಗೆ ಬಿಗ್‌ ಅಪ್ಡೇಟ್