Publish Date: Wed, 30 Oct 2024 (10:55 IST)
Updated Date: Wed, 30 Oct 2024 (10:57 IST)
ಬಳ್ಳಾರಿ: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ನಟ ದರ್ಶನ್ ಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು ಇದರ ಬೆನ್ನಲ್ಲೇ ಅವರ ಪ್ರತಿಕ್ರಿಯೆ ಹೇಗಿತ್ತು ಎನ್ನುವುದು ತಿಳದುಬಂದಿದೆ.
ಸಿವಿ ನಾಗೇಶ್ ಆರೋಗ್ಯದ ಹಿನ್ನಲೆಯಲ್ಲಿ ನಟ ದರ್ಶನ್ ಗೆ ಜಾಮೀನು ನೀಡುವಂತೆ ಹೈಕೋರ್ಟ್ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಈಗ ದರ್ಶನ್ ಗೆ ಮಧ್ಯಂತರ ಜಾಮೀನು ಮಂಜೂರಾಗಿದ್ದು ಆರು ವಾರಗಳಿಗೆ ರಿಲೀಫ್ ಸಿಕ್ಕಿದೆ.
ಈ ವಿಚಾರ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಗೂ ಮಾಹಿತಿ ತಿಳಿದಿದೆ. ತಮಗೆ ಮಧ್ಯಂತರ ಜಾಮೀನು ಸಿಕ್ಕ ವಿಚಾರ ತಿಳಿಯುತ್ತಿದ್ದಂತೇ ದರ್ಶನ್ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆಯೇ ಅವರಿಗೆ ಇಂದು ಜಾಮೀನು ಸಿಗಬಹುದು ಎಂಬ ವಿಶ್ವಾಸ ಬಂದಿತ್ತು. ಹೀಗಾಗಿ ನಿನ್ನೆಯಿಂದ ಅವರು ಕೊಂಚ ರಿಲ್ಯಾಕ್ಸ್ ನಲ್ಲಿದ್ದರು.
ಇದೀಗ ಹೈಕೋರ್ಟ್ ನೀಡಿರುವ ಮಧ್ಯಂತರ ಜಾಮೀನಿನ ಆದೇಶ ಬಳ್ಳಾರಿ ಜೈಲಿಗೆ ತಲುಪಿದ ಬಳಿಕ ದರ್ಶನ್ ಬಿಡುಗಡೆಯಾಗುತ್ತಾರೆ. ಇಂದು ಬೆಳಿಗ್ಗೆಯೇ ಜಾಮೀನು ಆದೇಶ ಹೊರಬಂದಿರುವ ಹಿನ್ನಲೆಯಲ್ಲಿ ಇಂದು ಸಂಜೆಯೊಳಗೆ ಆದೇಶ ಪ್ರತಿ ತಲುಪುವ ಸಾಧ್ಯತೆಯಿದ್ದು ಇಂದು ಸಂಜೆಯೇ ಅವರು ಜೈಲಿನಿಂದ ಹೊರಬರುವ ಸಾಧ್ಯತೆಯಿದೆ. ಇದೀಗ ಅವರ ಪತ್ನಿ ವಿಜಯಲಕ್ಷ್ಮಿ ಬಳ್ಳಾರಿಯತ್ತ ತೆರಳುತ್ತಿದ್ದಾರೆ.