ಬೆಂಗಳೂರು: ಮಾಧ‍್ಯಮಗಳ ಮುಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀಡಿದ ಹೇಳಿಕೆಯೊಂದು ನಿರ್ದೇಶಕ ಪ್ರೇಮ್ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಇದು ಈಗ ಪ್ರೇಮ್ ಪತ್ನಿ, ನಿರ್ಮಾಪಕಿ ರಕ್ಷಿತಾ ಮೇಲೂ ಪರಿಣಾಮ ಬೀರಿದೆ. ರಕ್ಷಿತಾಗೆ ಒಂದೆಡೆ ಪತಿ ಪ್ರೇಮ್ ಇನ್ನೊಂದೆಡೆ ಖಾಸಾ ದೋಸ್ತ್ ದರ್ಶನ್. ಇಬ್ಬರ ನಡುವೆ ಯಾರನ್ನು ಬೆಂಬಲಿಸುವುದು ಎಂಬ ಸಂದಿಗ್ಧತೆ ಎದುರಾಗಿದೆ.
ಪ್ರೇಮ್ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಕೆಲವರು ರಕ್ಷಿತಾರನ್ನೂ ಟ್ಯಾಗ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರಕ್ಷಿತಾ ದಯವಿಟ್ಟು ಇದರಲ್ಲಿ ನನ್ನನ್ನು ಎಳೀಬೇಡಿ. ನನಗೆ ಇಬ್ಬರೂ ಬೇಕು. ಪ್ರೇಮ್ ಮೇಲೆ ನನ್ನ ಪ್ರೀತಿಯಿದೆ, ದರ್ಶನ್ ಗೂ ನನ್ನ ಬೆಂಬಲವಿದೆ. ನನಗೆ ಈ ವಿಚಾರದಲ್ಲಿ ಯಾರನ್ನೇ ಬಿಟ್ಟುಕೊಡುವುದೂ ನೋವಿನ ವಿಚಾರ ಎಂದಿದ್ದಾರೆ.