ನಿರ್ಮಾಪಕ ಸೌಂದರ್ಯ ಜಗದೀಶ್ ಸಾವಿಗೆ ಪವಿತ್ರಾ ಗೌಡ, ದರ್ಶನ್ ಲಿಂಕ್

Krishnaveni K
ಸೋಮವಾರ, 24 ಜೂನ್ 2024 (14:25 IST)
ಬೆಂಗಳೂರು: ಇತ್ತೀಚೆಗಷ್ಟೇ ಆತ್ಮಹತ್ಯೆಗೆ ಶರಣಾಗಿದ್ದ ಸ್ಯಾಂಡಲ್ ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಸಾವಿಗೆ ಈಗ ಪವಿತ್ರಾ ಗೌಡ, ದರ್ಶನ್ ಹೆಸರು ಲಿಂಕ್ ಮಾಡಲಾಗುತ್ತಿದೆ.

ಸೌಂದರ್ಯ ಜಗದೀಶ್ ಹಣಕಾಸಿನ ವ್ಯವಹಾರದಲ್ಲಿ ವಂಚನೆಯಾಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಅವರು ಡೆತ್ ಕೂಡಾ ಬರೆದಿಟ್ಟಿದ್ದರು. ಪಾಲುದಾರರೇ ನನಗೆ ಸುಮಾರು 60 ಕೋಟಿ ರೂ. ಬಾಕಿ ಪಾವತಿಸದೇ ನನಗೆ ವಂಚನೆ ಮಾಡಿದ್ದಾರೆ ಎಂದು ಸೌಂದರ್ಯ ಜಗದೀಶ್ ಡೆತ್ ನೋಟ್ ನಲ್ಲಿ ಬರೆಯಲಾಗಿತ್ತು.

ಇದೀಗ ಇದೇ ಪ್ರಕರಣಕ್ಕೆ ದರ್ಶನ್ ಮತ್ತು ಪವಿತ್ರಾ ಗೌಡ ಹೆಸರು ಥಳುಕು ಹಾಕಲಾಗಿದೆ. ಸೌಂದರ್ಯ ಜಗದೀಶ್ ಆಪ್ತರಲ್ಲಿ ದರ್ಶನ್ ಕೂಡಾ ಒಬ್ಬರಾಗಿದ್ದರು. ಅವರು ತೀರಿಕೊಂಡಾಗ ಅಂತಿಮ ದರ್ಶನಕ್ಕೆ ಬಂದಿದ್ದ ದರ್ಶನ್ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದರು. ಆದರೆ ಈಗ ಈ ಸಾವಿನಲ್ಲಿ ದರ್ಶನ್-ಪವಿತ್ರಾ ಗೌಡ ಹೆಸರನ್ನು ಯಾರೋ ಹರಿಯಬಿಟ್ಟಿದ್ದಾರೆ.

ಪವಿತ್ರಾ ಗೌಡಗೆ ಹೊಸ ಮನೆ ಖರೀದಿ ಮಾಡಲು ಸೌಂದರ್ಯ ಜಗದೀಶ್ 2 ಕೋಟಿ ರೂ. ನೀಡಿದ್ದರು. ದರ್ಶನ್ ಒತ್ತಡಕ್ಕೆ ಮಣಿದು ಸೌಂದರ್ಯ ಜಗದೀಶ್ ಹಣ ನೀಡಿದ್ದರು. ಆದರೆ ಈವರೆಗೆ ಆ ಹಣ ವಾಪಸ್ ನೀಡಿರಲಿಲ್ಲ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಆ ಮೂಲಕ ಸೌಂದರ್ಯ ಜಗದೀಶ್ ಸಾವಿಗೂ ದರ್ಶನ್, ಪವಿತ್ರಾ ಹೆಸರು ಲಿಂಕ್ ಮಾಡಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

OG ನಟನಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ ನಟ, ಡಿಸಿಎಂ ಪವನ್ ಕಲ್ಯಾಣ್

ಎಂಎಸ್‌ ಸುಬ್ಬುಲಕ್ಷ್ಮಿ ಜೀವನಚರಿತ್ರೆಯ ಪಾತ್ರಕ್ಕೆ ಸಾಯಿಪಲ್ಲವಿ

ಮಗಳಿಗಾಗಿ ಪತ್ನಿಯನ್ನೇ ಕಿಡ್ನ್ಯಾಪ್ ಮಾಡಿದ ನಿರ್ಮಾಪಕ, ಏನಿದು ಸ್ಟೋರಿ

ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಗೀತಾ

ರಾಜ್ ಬಿ ಶೆಟ್ಟಿ ಹೆಸರೂ ಹೇಳದ ರಿಷಬ್ ಶೆಟ್ಟಿ: ನೆಟ್ಟಿಗರದ್ದು ಒಂದೇ ಪ್ರಶ್ನೆ

ಮುಂದಿನ ಸುದ್ದಿ
Show comments