ಪತಿ ದರ್ಶನ್ ನೋಡಲು ಬಂದು ಅರ್ಧಕ್ಕೇ ವಾಪಸ್ ಆದ ವಿಜಯಲಕ್ಷ್ಮಿ

Krishnaveni K
ಸೋಮವಾರ, 24 ಜೂನ್ 2024 (12:39 IST)
ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿರುವ ಪತಿ ದರ್ಶನ್ ರನ್ನು ನೋಡಲು ಬಂದ ಪತ್ನಿ ವಿಜಯಲಕ್ಷ್ಮಿ ಅರ್ಧದಿಂದಲೇ ವಾಪಸ್ ಆದ ಘಟನೆ ನಡೆದಿದೆ. ಪರಪ್ಪನ ಅಗ್ರಹಾರ ಜೈಲಿನ ಸಮೀಪ ಬಂದ ವಿಜಯಲಕ್ಷ್ಮಿ ಅಲ್ಲಿಂದಲೇ ಯೂ ಟರ್ನ್ ಆಗಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರದಿಂದ ದರ್ಶನ್ ಆಂಡ್ ಗ್ಯಾಂಗ್ ನ್ಯಾಯಾಂಗ ಬಂಧನದಲ್ಲಿದ್ದಾರೆ. 10 ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಬಳಿಕ ದರ್ಶನ್ ಆಂಡ್ ಗ್ಯಾಂಗ್ ಈಗ ಜೈಲು ವಾಸದಲ್ಲಿದ್ದಾರೆ. ಎರಡು ದಿನಗಳಿಂದ ಸಾಮಾನ್ಯ ಕೈದಿಗಳಂತೇ ದರ್ಶನ್ ಮತ್ತು ಗ್ಯಾಂಗ್ ನ್ನು ಟ್ರೀಟ್ ಮಾಡಲಾಗುತ್ತಿದೆ.

ನಿನ್ನೆ ಭಾನುವಾರವಾಗಿದ್ದರಿಂದ ಆರೋಪಿಗಳ ಕುಟುಂಬಸ್ಥರ ಭೇಟಿಗೆ ಅವಕಾಶವಿರಲಿಲ್ಲ. ಇಂದು ದರ್ಶನ್ ಭೇಟಿಗೆ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ಕಾರಿನಲ್ಲಿ ಬಂದಿದ್ದರು. ಆದರೆ ಪರಪ್ಪನ ಅಗ್ರಹಾರದ ಬಳಿ ಮಾಧ್ಯಮಗಳ ದಂಡು ನೋಡಿ ವಿಜಯಲಕ್ಷ್ಮಿ ಕಾರು ಯೂ ಟರ್ನ್ ತೆಗೆದುಕೊಂಡು ವಾಪಸಾಗಿದೆ.

ಈ ಪ್ರಕರಣದಲ್ಲಿ ವಿಜಯಲಕ್ಷ್ಮಿಯನ್ನೂ ಪೊಲೀಸರು ವಿಚಾರಣೆ ನಡೆಸಿದ್ದರು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಮಾಧ್ಯಮಗಳು ತಮ್ಮ ಪತಿ ಬಗ್ಗೆ ಯಾವುದೇ ಅವಹೇಳನಾಕರೀ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿರುವುದಾಗಿ ಹೇಳಿದ್ದರು.  ಇದರ ಹೊರತಾಗಿ ಅವರು ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬರ್ತಡೇ ದಿನ ನಟ ಶಾರುಖ್‌ ಖಾನ್‌ಗೆ ಸಂಸದ ಶಶಿ ತರೂರ್‌ ಹೇಗೇ ಕಾಲೆಳೆಯುವುದಾ

ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್​ಗೆ 60ರ ಸಂಭ್ರಮ: ಮನೆಮುಂದೆ ಅಭಿಮಾನಿಗಳ ಜಾತ್ರೆ

ಆತಂಕದಲ್ಲಿರುವ ಫ್ಯಾನ್ಸ್‌ಗೆ ನಟ ಧರ್ಮೇಂದ್ರ ಆರೋಗ್ಯದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್‌

ನಟ ದರ್ಶನ್ ಅಭಿಮಾನಿಗಳ ನಡವಳಿಕೆಗೆ ವೇದಿಕೆಯಿಂದಲೇ ಕೆಳಗಿಳಿದ ರಚಿತಾ ರಾಮ್‌

ನಟಿ ಶಿಲ್ಪಾಗೆ ಮುಗಿಯದ ಸಂಕಷ್ಟ, ತಾಯಿ ಸುನಂದಾ ಶೆಟ್ಟಿ ಆಸ್ಪತ್ರೆಗೆ ದಾಖಲು

ಮುಂದಿನ ಸುದ್ದಿ
Show comments