ರಾತ್ರಿಯಾದರೆ ಸೊಳ್ಳೆಕಾಟ, ಉಪ್ಪು,ಖಾರವಿಲ್ಲದ ಊಟ: ನಟ ದರ್ಶನ್, ಗೆಳತಿ ಪವಿತ್ರಾ ಗೌಡಗೆ ಜೈಲಿನಲ್ಲಿ ನರಕದರ್ಶನ

Krishnaveni K
ಸೋಮವಾರ, 24 ಜೂನ್ 2024 (10:55 IST)
Photo Credit: Instagram
ಬೆಂಗಳೂರು: ಇಷ್ಟು ದಿನ ಐಷಾರಾಮಿ ಜೀವನ ನಡೆಸುತ್ತಿದ್ದ ನಟ ದರ್ಶನ್ ಮತ್ತು ಗೆಳತಿ ಪವಿತ್ರಾ ಗೌಡಗೆ ಈಗ ಜೈಲಿನಲ್ಲಿ ಅಕ್ಷರಶಃ ನರಕದರ್ಶನವಾಗುತ್ತಿದೆ. ಜೈಲಿನ ಜೀವನಕ್ಕೆ ಹೊಂದಿಕೊಳ್ಳಲಾಗದೇ ಪರದಾಡುತ್ತಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್, ಪವಿತ್ರಾಗೌಡ ಸೇರಿದಂತೆ ಎಲ್ಲಾ ಆರೋಪಿಗಳನ್ನೂ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಶನಿವಾರದಂದು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಜುಲೈ 4 ರವರೆಗೆ ಇವರ ನ್ಯಾಯಾಂಗ ಬಂಧನವಿರಲಿದೆ.

ಜೈಲಿಗೆ ಹೋದ ದಿನದಿಂದಲೂ ದರ್ಶನ್ ಮಂಕಾಗಿ ಕುಳಿತಿದ್ದಾರೆ. ಜೈಲಿನ ಊಟ ಸೇರದೇ ಪರದಾಡುತ್ತಿದ್ದಾರೆ. ಎರಡನೇ ದಿನವಾದ ನಿನ್ನೆ ಕೇವಲ ಚಪಾತಿ, ಮಜ್ಜಿಗೆ ಸೇವಿಸಿದ್ದಾರೆ. ಪ್ರತಿನಿತ್ಯ ಮಾಂಸದೂಟ ಮಾಡುತ್ತಿದ್ದ ದರ್ಶನ್ ಗೆ ಈಗ ಜೈಲಿನ ನಿಯಮಿತ ಊಟ ಸೇರುತ್ತಿಲ್ಲವಂತೆ.

ಇತ್ತ ಪವಿತ್ರಾ ಗೌಡ ಕತೆಯೂ ಇದೇ ಆಗಿದೆ. ಐಷಾರಾಮಿ ಜೀವನಕ್ಕೆ ಒಗ್ಗಿಹೋಗಿದ್ದ ಪವಿತ್ರಾಗೆ ಜೈಲಿನಲ್ಲಿ ಉಪ್ಪು-ಖಾರವಿಲ್ಲದ ಊಟ ಸೇರುತ್ತಿಲ್ಲ. ಜೊತೆಗೆ ಜೈಲು ಕೊಠಡಿಯಲ್ಲಿ ಬರಿಯ ಚಾಪೆ, ಬೆಡ್ ಶೀಟ್ ನೀಡಲಾಗಿದೆ. ಸೊಳ್ಳೆ ಕಾಟದಿಂದ ನಿದ್ರೆಯೂ ಮಾಡಲಾಗದೇ ಪರದಾಡುತ್ತಿದ್ದಾರೆ. ರಾತ್ರಿಯಿಡೀ ನಿದ್ರೆ ಮಾಡಲಾಗದೇ ಪದೇ ಪದೇ ಎದ್ದು ಕೂರುತ್ತಿದ್ದಾರೆ. ತಮಗಾದ ಪರಿಸ್ಥಿತಿಯಿಂದ ಮಂಕಾಗಿ ಸಹ ಕೈದಿಗಳ ಜೊತೆಗೂ ಬೆರೆಯುತ್ತಿಲ್ಲ ಎಂದು ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹೃತಿಕ್ ರೋಷನ್ ಮಾಜಿ ಪತ್ನಿ ಸುಸ್ಸಾನ್ನೆ ಖಾನ್ ತಾಯಿ ಇನ್ನಿಲ್ಲ

ಸಿನಿಮಾ ಸಕ್ಸಸ್ ನಡುವೆ ದಿಢೀರನೆ ಠಾಣೆ ಮೆಟ್ಟಿಲೇರಿದ ಕಾಂತಾರ ಬೆಡಗಿ ರುಕ್ಮಿಣಿ ವಸಂತ್

ತೂಕದ ಬಗ್ಗೆ ಹಾಸ್ಯ ಮಾಡಿದ ಪತ್ರಕರ್ತನಿಗೆ ಮಾತಿನೇಟು ನೀಡಿದ ತಮಿಳು ನಟಿ ಗೌರಿ ಕಿಶನ್

ನಿಮ್ಮ ಮೇಲಿನ ನನ್ನ ಗೌರವ ದ್ವಿಗುಣಗೊಂಡಿದೆ: ರಿಷಬ್ ಬಗ್ಗೆ ಖುಷ್ಬೂ ಸುಂದರ್ ಗುಣಗಾನ

ಕ್ಲೈಮ್ಯಾಕ್ಸ್‌ ಹಂತಕ್ಕೆ ನಟಿ ರನ್ಯಾ ವಿರುದ್ಧದ ಪ್ರಕರಣ: ಶೀಘ್ರದಲ್ಲೇ ಚಾರ್ಚ್‌ಶೀಟ್‌ ಸಲ್ಲಿಕೆ

ಮುಂದಿನ ಸುದ್ದಿ
Show comments