Publish Date: Wed, 30 Oct 2024 (12:11 IST)
Updated Date: Wed, 30 Oct 2024 (12:16 IST)
ಬೆಂಗಳೂರು: ನಮ್ ಬಾಸ್ ಬಂದ್ರು, ಇನ್ಮೇಲೆ ಕಾನೂನು ಹೋರಾಟವೊಂದೇ ಬಾಕಿ, ಅದರಲ್ಲೂ ಅವರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ದರ್ಶನ್ ಫ್ಯಾನ್ಸ್ ಪಟಾಕಿ ಹಚ್ಚಿ ಸಂಭ್ರಮಿಸಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಟ ದರ್ಶನ್ ಗೆ ಇಂದು ಹೈಕೋರ್ಟ್ ಅನಾರೋಗ್ಯದ ಹಿನ್ನಲೆಯಲ್ಲಿ ಆರು ವಾರಗಳ ಮಧ್ಯಂತರ ಜಾಮೀನು ನೀಡಿದೆ. ಇಂದೇ ಎಲ್ಲಾ ಕಾನೂನು ಪ್ರಕ್ರಿಯೆಗಳು ಮುಗಿದರೆ ಅವರು ಬಳ್ಳಾರಿ ಜೈಲಿನಿಂದ ರಿಲೀಸ್ ಆಗಲಿದ್ದಾರೆ.
ದರ್ಶನ್ ಗೆ ಜಾಮೀನು ಸಿಕ್ಕಿತು ಎಂಬ ಸುದ್ದಿ ತಿಳಿಯುತ್ತಿದ್ದಂತೇ ಅವರ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಜಯನಗರದಲ್ಲಿ ರಸ್ತೆ ಮಧ್ಯೆಯೇ ಪಟಾಕಿ ಹಚ್ಚಿ ಫ್ಯಾನ್ಸ್ ಸಂಭ್ರಮಿಸಿದ ವಿಡಿಯೋ ವೈರಲ್ ಆಗಿದೆ. ಇದು ದರ್ಶನ್ ಗೆ ದೊಡ್ಡ ಗೆಲುವು ಎಂದೇ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಸದ್ಯಕ್ಕೆ ನ್ಯಾಯಾಲಯ ಮಧ್ಯಂತರ ಜಾಮೀನು ಮಾತ್ರ ನೀಡಿದೆ. ಆರು ವಾರಗಳನ್ನು ತಮ್ಮ ಚಿಕಿತ್ಸೆಗಾಗಿಯಷ್ಟೇ ಅವರು