Publish Date: Mon, 29 Jan 2018 (06:56 IST)
Updated Date: Mon, 29 Jan 2018 (06:59 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕನ್ನಡದ ಮೇಲೆ ಎಷ್ಟು ಅಭಿಮಾನ ಇದೆ ಎಂಬುದು ಎಲ್ಲರಿಗೂ ತಿಳಿದೆ ಇದೆ. ಈ ಹಿಂದೆ ಹೈದರಾಬಾದ್ ನ ಹೋಟೆಲ್‍ವೊಂದರಲ್ಲಿ ಕನ್ನಡ ಚಾನೆಲ್ ಬರದೇ ಇದ್ದಕ್ಕೆ ಗರಂ ಆಗಿದ್ದ ದರ್ಶನ್ ಅವರು ಇತ್ತಿಚೆಗೆ ದೂರದ ಗಡಿಯಲ್ಲಿರುವ ಕನ್ನಡ ಶಾಲೆಯ ಮಕ್ಕಳಿಗೆ ಸಹಾಯ ಹಸ್ತವನ್ನು ನೀಡಿವುದರ ಮೂಲಕ ಕನ್ನಡಪ್ರೇಮವನ್ನು ನಿರೂಪಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಬಬಲಾದ್ ಗ್ರಾಮದಲ್ಲಿದ್ದ ಕನ್ನಡ ಶಾಲೆಯೊಂದರ ಬಗ್ಗೆ ದರ್ಶನ್ ಅವರು ಹೇಗೋ ತಿಳಿದುಕೊಂಡು, ಅಲ್ಲಿಯ ಶಿಕ್ಷಕರಾದ ಶರಣಪ್ಪ ಪುಲರಿ ಎಂಬವರನ್ನು ಕರೆಸಿಕೊಂಡು 127 ಮಕ್ಕಳ ಡಿಜಿಟಲ್ ಶಿಕ್ಷಣಕ್ಕಾಗಿ ಒಟ್ಟು 30 ಟ್ಯಾಬ್‍ಗಳನ್ನ ಕೊಡಿಸುವುದರ ಮೂಲಕ ಕನ್ನಡದ ಕಂದಮ್ಮಗಳಿಗೆ ರಿಯಲ್ ಹೀರೋ ಆಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ