Select Your Language

Notifications

webdunia
webdunia
webdunia
webdunia

ಸ್ಟಾರ್ ಸಿನಿಮಾಗಳ ರಿಲೀಸ್ ಗೆ ಕೊರೋನಾ ಬ್ರೇಕ್

ಸ್ಯಾಂಡಲ್ ವುಡ್
ಬೆಂಗಳೂರು: ಕೊರೋನಾದಿಂದಾಗಿ ರಾಜ್ಯ ಸರ್ಕಾರ ಥಿಯೇಟರ್ ಗಳಲ್ಲಿ ಮತ್ತೆ ಶೇ.50 ಮಂದಿಗೆ ಅವಕಾಶ ನೀಡಿ ಆದೇಶ ಹೊರಡಿಸಿದೆ. ಇದು ಬಿಗ್ ಸ್ಟಾರ್ ಗಳ ಸಿನಿಮಾ ಬಿಡುಗಡೆಯಾಗಿ ಅಡ್ಡಿಯಾಗಿದೆ.


ಸರ್ಕಾರ 100 ಶೇಕಡಾ ಸೀಟು ಭರ್ತಿಗೆ ಅವಕಾಶ ನೀಡಿದ ಬೆನ್ನಲ್ಲೇ ದರ್ಶನ್ ಅಭಿನಯದ ರಾಬರ್ಟ್, ಧ್ರುವ ಸರ್ಜಾರ ‘ಪೊಗರು’, ಪುನೀತ್ ಅವರ ಯುವರತ್ನ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆಯಿಂದ ಖುಷಿಯಾಗಿದ್ದು ಬೇರೆ ಸಿನಿಮಾ ನಿರ್ಮಾಪಕರೂ ತಮ್ಮ ಸಿನಿಮಾ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದರು.

ಆದರೆ ಈಗ ಮತ್ತೆ ಶೇ.50 ಮಂದಿಗೆ ಅವಕಾಶ ನೀಡಿರುವುದರಿಂದ ಸ್ಟಾರ್ ಸಿನಿಮಾಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಸಲಗ ಸಿನಿಮಾ ತಂಡ ಈಗಾಗಲೇ ಬಿಡುಗಡೆ ದಿನಾಂಕ ಮುಂದೂಡುವ ಸುಳಿವು ನೀಡಿದೆ. ಅದರಂತೆ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಕೂಡಾ ಮುಂದಕ್ಕೆ ಹೋಗುವ ನಿರೀಕ್ಷೆಯಿದೆ. ಹೀಗಾಗಿ ಮತ್ತೆ ಥಿಯೇಟರ್ ಗಳಲ್ಲಿ ಸ್ಟಾರ್ ಸಿನಿಮಾ ನೋಡಲು ಅಭಿಮಾನಿಗಳು ಕಾಯಬೇಕಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಸೋಂಕಿಗೆ ಒಳಗಾದ ನಟಿ ನಿವೇದಾ ಥಾಮಸ್