Select Your Language

Notifications

webdunia
webdunia
webdunia
webdunia

ಕೊತ್ತಲವಾಡಿ ತಂಡದ ವಿರುದ್ಧ ಆರೋಪ ಮಾಡಿದ್ದ ಸಹನಟಿ ಸ್ವರ್ಣಗೆ ಬಿಗ್‌ ಶಾಕ್‌

ಕೊತ್ತಲವಾಡಿ ಸಿನಿಮಾ

Sampriya

ಬೆಂಗಳೂರು , ಬುಧವಾರ, 17 ಸೆಪ್ಟಂಬರ್ 2025 (18:10 IST)
Photo Credit X
ಕೊತ್ತಲವಾಡಿ ಚಿತ್ರದಲ್ಲಿ ಅಭಿನಯಿಸಿದ್ದ ಸಹನಟಿ ತನಗೆ ಸಿನಿಮಾ ತಂಡದಿಂದ ಸಂಭಾವನೆ ಬಂದಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡ ಬೆನ್ನಲ್ಲೇ ಸ್ವರ್ಣ ವಿರುದ್ಧ ಇದೀಗ ದೂರು ದಾಖಲಾಗಿದೆ. 

ಸ್ವರ್ಣಗೂ ಮುನ್ನಾ ಸಹನಟ ಮಹೇಶ್ ಗುರು ಕೂಡಾ ಸಿನಿಮಾ ತಂಡದ ವಿರುದ್ಧ ಆರೋಪ ಮಾಡಿ, ತನಗೆ ಸಂಭಾವನೆ ಬಂದಿಲ್ಲ ಎಂದು ಅಳಲು ತೋಡಿಕೊಂಡಿದ್ದರು. 

ಸೋಶಿಯಲ್ ಮೀಡಿಯಾದಲ್ಲಿ ನಿರ್ದೇಶಕ ಶ್ರೀರಾಜ್ ಹಾಗೂ ನಿರ್ಮಾಣ ಸಂಸ್ಥೆ ವಿರುದ್ಧ ಆರೋಪ ಮಾಡಿದ್ದರು. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ನಿರ್ದೇಶಕ ಶ್ರೀರಾಜ್, ಕಲಾವಿದ ಮಹೇಶ್ ವಿರುದ್ಧ ದೂರು ನೀಡಿದ್ದರು. ಇದೀಗ ಸಹನಟಿ ಸ್ವರ್ಣ ವಿರುದ್ಧವೂ ದೂರು ನೀಡಿದ್ದಾರೆ.

ಕೊತ್ತಲವಾಡಿ ಸಹನಟಿ ಸ್ವರ್ಣ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ವೀಡಿಯೋ ಮೂಲಕ ನಿರ್ದೇಶಕರ ವಿರುದ್ಧ ಮಾತನಾಡಿದ್ದರು. ಸಿನಿಮಾದಲ್ಲಿ ಕಷ್ಟ ಪಟ್ಟು ನಟಿಸಿದ್ದೇನೆ. ಸಂಭಾವನೆಯ ಬಗ್ಗೆ ಮಾತನಾಡಿರುವಷ್ಟು ಅವರು ಹಣ ಕೊಟ್ಟಿಲ್ಲ ಎಂದು ಆರೋಪಿಸಿದ್ದರು. 
ಹೀಗಾಗಿ ನಿರ್ದೇಶಕ ಶ್ರೀರಾಜ್ ಅವರು ನಟಿ ಸ್ವರ್ಣ ವಿರುದ್ಧ ದೂರು ದಾಖಲಿಸಿದ್ದಾರೆ.

ವೈಯಕ್ತಿಕ ತೇಜೋವಧೆ ಹಾಗೂ ಯಶ್‌ ತಾಯಿ ಪುಷ್ಪ ಅರುಣ್‌ಕುಮಾರ್ ಸಿನಿಮಾ ನಿರ್ಮಾಣ ಸಂಸ್ಥೆಗೆ ಮಾನಹಾನಿ ಮಾಡಿರುವುದನ್ನ ಖಂಡಿಸಿ ದೂರು ನೀಡಿದ್ದು, ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣು ಮಗುವಿನ ತಾಯಿಯಾದ ಲಕ್ಷ್ಮೀ ಬಾರಮ್ಮ ಖ್ಯಾತಿಯ ಹರ್ಷಿತಾ