Select Your Language

Notifications

webdunia
webdunia
webdunia
Monday, 7 April 2025
webdunia

ಕನ್ನಡ ವಿವಾದಕ್ಕೆ ಕ್ಷಮೆ ಕೇಳಿದ ನಯನಾ

ಕಾಮಿಡಿ ಕಿಲಾಡಿಗಳು ನಯನಾ
ಬೆಂಗಳೂರು , ಭಾನುವಾರ, 12 ಜುಲೈ 2020 (09:15 IST)
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಮಾತನಾಡಿ ಎಂದು ಕೆಣಕಿದ ನೆಟ್ಟಿಗನಿಗೆ ಮುಚ್ಕೊಂಡು ನಿನ್ನ ಕೆಲಸ ನೋಡ್ಕೋ ಎಂದು ಕಾಮಿಡಿ ಕಿಲಾಡಿಗಳು ನಯನಾ ಕಾಮೆಂಟ್ ಮಾಡಿದ್ದು ವಿವಾದಕ್ಕೀಡಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರೀಗ ಕ್ಷಮೆ ಕೇಳಿದ್ದಾರೆ.


ನಾನು ಎಲ್ಲೇ ಹೋದರೂ ಯಾವುದೇ ಕಾರ್ಯಕ್ರಮಕ್ಕೂ ಹೋದರೂ ನಾನು ಇಂಗ್ಲಿಷ್ ನವಳು, ಇಂಗ್ಲಿಷ್ ವ್ಯಾಮೋಹ ಇದೆ ಅಂತ ಎಲ್ಲೂ ತೋರಿಸಿಲ್ಲ. ನನಗೆ ಕನ್ನಡದ ಬಗ್ಗೆ, ನಮ್ಮದೇ ಭಾಷೆ ಎನ್ನುವ ಅಭಿಮಾನವಿದೆ.

ಆ ವ್ಯಕ್ತಿ ನನಗೆ ಬೇಕೆಂದೇ ಕೆಣಕುವ ರೀತಿ ಕಾಮೆಂಟ್ ಮಾಡಿದ್ದ. ಅವನ ದಾಟಿಗೆ ನಾನು ಆ ರೀತಿ ಕಾಮೆಂಟ್ ಮಾಡಿದ್ದೆ. ನನ್ನ ಆ ಕಾಮೆಂಟ್ ಗೆ ಹಲವರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಂತಹವರ ಬಗ್ಗೆ ನಾನೇನು ಹೇಳಲು ಹೋಗಲ್ಲ. ನಾನು ಈ ಕ್ಷಮೆಯನ್ನು ಕೇಳುತ್ತಿರುವುದು ಕನ್ನಡದ ಅಪ್ಪಟ ಅಭಿಮಾನಿಗಳಿಗೆ ಮಾತ್ರ.

ನಾನು ಕನ್ನಡವನ್ನು ನಿರ್ಲಕ್ಷ್ಯ ಮಾಡಿದ್ದೇನೆಂದು ನೀವು ಏನಾದರೂ ಪ್ರೂವ್ ಮಾಡಿದ್ರೆ ನಂಗೆ ತೋರಿಸಿ. ಇಂಗ್ಲಿಷ್ ನ್ನು ಊಟಕ್ಕೆ ಉಪ್ಪಿನಕಾಯಿಯ ಹಾಗೆ ಉಪಯೋಗಿಸುತ್ತಿದ್ದೇನೆ. ನಾನು ಹೀಗಾಗಿ ನನ್ನ ಕಡೆಯಿಂದ ತಪ್ಪಾದರೆ ಅಪ್ಪಟ ಕನ್ನಡದ ಅಭಿಮಾನಿಗಳಿಗೆ ನಾನು ಕ್ಷಮೆ ಕೇಳುತ್ತೇನೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಿ ಅಮಿತಾಭ್ ಬಚ್ಚನ್, ಪುತ್ರ ಅಭಿಷೇಕ್ ಗೂ ಕೊರೋನಾ: ಮುಂಬೈ ಆಸ್ಪತ್ರೆಗೆ ದಾಖಲು