ರಾಧಾ ರಮಣ ನಟ ಸುಶೀಲ್ ಗೌಡ ಆತ್ಮಹತ್ಯೆ ಬಗ್ಗೆ ಕಿರುತೆರೆ ನಟರು ಹೇಳಿದ್ದೇನು ಗೊತ್ತಾ?

ಗುರುವಾರ, 9 ಜುಲೈ 2020 (09:20 IST)
ಬೆಂಗಳೂರು: ಮೊನ್ನೆಯಷ್ಟೇ ಬಾಲಿವುಡ್ ನ ಉದಯೋನ್ಮುಖ ಪ್ರತಿಭೆ ಸುಶಾಂತ್ ಸಿಂಗ್ ರಜಪೂತ್ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು.


ಅದೇ ರೀತಿಯ ಘಟನೆ ಇದೀಗ ಕನ್ನಡ ಕಿರುತೆರೆಯಲ್ಲೂ ನಡೆದಿದೆ. ಮಾನಸಿಕ ಖಿನ್ನೆತೆಯಿಂದ ಬಳಲುತ್ತಿದ್ದ ಕಿರುತೆರೆ ನಟ ಸುಶೀಲ್ ಗೌಡ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಬಂದಿದೆ.

ರಾಧಾರಮಣ ಧಾರವಾಹಿಯ ಆರಂಭದ ಎಪಿಸೋಡ್ ನೋಡಿದವರಿಗೆ ಈ ನಟನ ಪರಿಚಯ ಚೆನ್ನಾಗಿರುತ್ತದೆ. ರಾಧಾ ಟೀಚರ್ ನ ಮದುವೆಯಾಗುವ ‘ಸಾಗರ್’ ಎನ್ನುವ ಪಾತ್ರ ಮಾಡಿದ್ದ ಈ ನಟನ ಸಾವಿಗೆ ಕಿರುತೆರೆ ಲೋಕ ಕಂಬನಿ ಮಿಡಿದಿದೆ.

ಸುಶೀಲ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಟ ಜಯರಾಮ್ ಕಾರ್ತಿಕ್ ‘ಏನಾಗುತ್ತಿದೆ ಈ ಜಗತ್ತಿಗೆ? ಸಮಸ್ಯೆಗಳು ಏನೇ ಇರಲಿ. ಅದನ್ನು ನಾವು ಎದುರಿಸೋಣ. ಈ ರೀತಿ ಸೋತು ಜೀವನ ಕೊನೆಗೊಳಿಸುವಂತಹ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಇದು ನಿಮ್ಮನ್ನು ನಂಬಿಕೊಂಡವರಿಗೆ ಎಷ್ಟು ನೋವು ತರುತ್ತದೆ ಎನ್ನುವುದನ್ನು ಯೋಚಿಸಿ ಎಂದು ಬರೆದುಕೊಂಡಿದ್ದಾರೆ.

ಇನ್ನು ರಾಧಾ ಖ್ಯಾತಿಯ ನಟಿ ಶ್ವೇತಾ ಪ್ರಸಾದ್ ಕೂಡಾ ಕಂಬನಿ ಮಿಡಿದಿದ್ದು, ಯಾರಾದರೂ ನಿಮ್ಮ ಫ್ರೆಂಡ್ಸ್ ಸರ್ಕಲ್ ನಲ್ಲಿ ಹಲವು ದಿನಗಳಿಂದ ಮೌನವಾಗಿದ್ದರೆ, ವ್ಯಾಟ್ಸಪ್ ಡಿಪಿ ತೆಗೆದು ಹಾಕುವುದು, ವಿಚಿತ್ರವಾಗಿ ಬರೆದುಕೊಳ್ಳುವುದು ಮಾಡಿದರೆ ಅಂತಹವರ ಬಗ್ಗೆ ಗಮನ ಕೊಡಿ. ಅವರಿಗೆ ನಾನಿದ್ದೇನೆ ಎಂದು ಭರವಸೆ ಕೊಡಿ ಎಂದು ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರೆಬಲ್ ಸ್ಟಾರ್ ಪ್ರಭಾಸ್ ಕಡೆಯಿಂದ ನಾಳೆ ಹೊಸ ಸುದ್ದಿ!