Select Your Language

Notifications

webdunia
webdunia
webdunia
webdunia

ನಾಳೆಯಿಂದ ಕಾಮಿಡಿ ಕಿಲಾಡಿಗಳು ಶೋ ಶುರು, ಜಡ್ಜ್ ಯಾರು ಗೊತ್ತಾ

Comedy Khiladigalu Show

Sampriya

ಬೆಂಗಳೂರು , ಶುಕ್ರವಾರ, 24 ಅಕ್ಟೋಬರ್ 2025 (16:31 IST)
Photo Credit X
ಜೀ ಕನ್ನಡ ತನ್ನ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಒಂದಲ್ಲ ಒಂದು ಶೋಗಳನ್ನು ತರುತ್ತಲೇ ಇರುತ್ತದೆ. ಇದೀಗ ಎಲ್ಲರ ಅಚ್ಚುಮೆಚ್ಚಿನ ನಾನ್ ಫಿಕ್ಷನ್ ಶೋ ಕಾಮಿಡಿ ಕಿಲಾಡಿಗಳು ಮತ್ತೇ ಟಿವಿ ಮೇಲೆ ಬರಲು ಸಿದ್ಧವಾಗಿದೆ. 

ಯಶಸ್ವಿ ಕಾಮಿಡಿ ಶೋಗಳನ್ನು ನೀಡಿದ ಬಳಿಕ ಇದೀಗ ಜೀ ಕನ್ನಡ ಮತ್ತೇ ಕಾಮಿಡಿ ಕಿಲಾಡಿಗಳು ಶೋವನ್ನು ಇದೇ 25ರಿಂದ ರಾತ್ರಿ 9 ಗಂಟೆಗೆ ಶುರು ಮಾಡಲಿದೆ. ಇದು ಪ್ರತಿ ವಾರಾಂತ್ಯದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

ಇನ್ನೂ ಅಚ್ಚರಿ ಏನೆಂದರೆ ಇದುವರೆಗೆ ಮಾಸ್ಟರ್ ಆನಂದ್ ಅವರು ಕಾಮಿಡಿ ಕಿಲಾಡಿಗಳು ಶೋವನ್ನು ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಆದರೆ ಈ ಬಾರಿ ನಿರಂಜನ್ ದೇಶಪಾಂಡೆ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ. ‌

ಅದಲ್ಲದೆ ನಟಿ ರಕ್ಷಿತಾ ಅವರು ಈ ಹಿಂದಿನ ಶೋನಲ್ಲಿ ಜಡ್ಜ್ ಆಗಿದ್ದರು. ಈ ಬಾರಿ ನಟಿ ತಾರಾ ಅನುರಾಧಾ, ತಮ್ಮ ಸಿನಿಮಾಗಳಲ್ಲಿ ನಗೆಗಡಲಲ್ಲಿ ತೇಲಿಸಿದ ಕಾಮಿಡಿ ಕಿಂಗ್ ಜಗ್ಗೇಶ್ ಮತ್ತು ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್ಅವರು ಜಡ್ಜ್  ಆಗಿ ಶೋವನ್ನು ನಡೆಸಿಕೊಡಲಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅಬ್ ಕಿ ಬಾರ್, ಮೋದಿ ಸರ್ಕಾರ್ ಘೋಷಣೆ ಹಿಂದಿನ ವ್ಯಕ್ತಿ ಪಿಯೂಷ್ ಪಾಂಡೆ ಇನ್ನಿಲ್ಲ