Webdunia - Bharat's app for daily news and videos

Install App

ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಕಿರುತೆರೆಯ ಹಿಟ್ ಜೋಡಿ ಚಂದನ್-ಕವಿತಾ ಗೌಡ

Webdunia
ಬುಧವಾರ, 31 ಮಾರ್ಚ್ 2021 (07:46 IST)
ಬೆಂಗಳೂರು: ಕಿರುತೆರೆಯ ಖ್ಯಾತ ಜೋಡಿ ಚಂದನ್ ಕುಮಾರ್-ಕವಿತಾ ಗೌಡ ಕೊನೆಗೂ ತಮ್ಮ ಪ್ರೀತಿ ವಿಚಾರವನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದು, ನಿಶ್ಚಿತಾರ್ಥದ ದಿನಾಂಕವನ್ನೂ ಬಹಿರಂಗಪಡಿಸಿದ್ದಾರೆ.


ಇದುವರೆಗೆ ಚಂದನ್-ಕವಿತಾ ಲವ್ ಅಫೇರ್ ಬಗ್ಗೆ ಸಾಕಷ್ಟು ರೂಮರ್ ಗಳು ಹರಿದಾಡುತ್ತಿದ್ದವು. ಆದರೆ ಈಗ ಚಂದನ್ ತಮ್ಮಿಬ್ಬರ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. ಏಪ್ರಿಲ್ ರಂದು ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ಚಂದನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಭರ್ಜರಿ ಖುಷಿ ನೀಡಿದೆ.

ಕೊನೆಗೂ ನಿಮ್ಮಿಬ್ಬರ ಸಂಬಂಧವನ್ನು ಒಪ್ಪಿಕೊಂಡಿರಲ್ಲ. ನಿಮ್ಮಿಬ್ಬರದ್ದು ಸೂಪರ್ ಜೋಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅತ್ತ ಕವಿತಾ ಕೂಡಾ ಚಂದನ್ ಜೊತೆಗಿನ ಫೋಟೋ ಪ್ರಕಟಿಸಿದ್ದಾರೆ. ಇಬ್ಬರೂ ಕಲರ್ಸ್ ಕನ್ನಡ ವಾಹಿನಿಯ ‘ಲಕ್ಷ್ಮೀ ಬಾರಮ್ಮಾ’ ಧಾರವಾಹಿಯಲ್ಲಿ ನಾಯಕ-ನಾಯಕಿಯಾಗಿ ಅಭಿನಯಿಸಿದ್ದರು.

ಇತ್ತೀಚೆಗೆ ಚಂದನ್ ತಮ್ಮ ತೆಲುಗು ಧಾರವಾಹಿಯಿಂದ ಹೊರಬಂದಿದ್ದರು. ಮದುವೆಗಾಗಿ ಕೆಲವು ದಿನ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದರು. ಇದೀಗ ಇಬ್ಬರೂ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸು ಫ್ರಮ್ ಸೋ ಭಾನುವಾರದ ದಾಖಲೆ ಏನಾಗಿದೆ ನೋಡಿ

ಕಾಲಿವುಡ್‌ನಲ್ಲಿ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸ್ಮೈಲ್‌ ರಾಜ ಹಾಸ್ಯನಟ ಮದನ್‌ಬಾಲು ನಿಧನ

ಶೂಟಿಂಗ್‌ಗಾಗಿ ತಂಗಿದ್ದ ಹೊಟೇಲ್‌ನಲ್ಲಿ ಶವವಾಗಿ ಪತ್ತೆಯಾದ ಮಲಯಾಳಂ ನಟ ಕಲಾಭವನ್‌

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗುತ್ತಿದ್ದಂತೇ ನಟಿ ರಮ್ಯಾ ರಿಯಾಕ್ಷನ್ ನೋಡಿ

ವಿಜಯ್ ದೇವರಕೊಂಡ ಸೋಲಿನ ಸರಣಿಯನ್ನು ಕೊನೆಗೊಳಿಸಿದ ಕಿಂಗ್‌ಡಮ್‌: ಗೆಳೆಯನ ಸಕ್ಸಸ್‌ಗೆ ರಶ್ಮಿಕಾ ಫುಲ್ ಹ್ಯಾಪಿ

ಮುಂದಿನ ಸುದ್ದಿ
Show comments