Daily Horoscope

Select Your Language

Notifications

webdunia
webdunia
webdunia
webdunia

ಎಂಥಾ ವಿಶೇಷ ದಿನ ಚಂದನ್ ಕುಮಾರ್, ಕವಿತಾ ಗೌಡಗೆ ಮಗುವಾಯ್ತು

Chandan Kumar-Kavitha Gowda
Photo Credit: Facebook
ಬೆಂಗಳೂರು: ಕಿರುತೆರೆಯ ಜನಪ್ರಿಯ ಜೋಡಿಗೆ ಗಂಡು ಮಗುವಿನ ಜನನವಾಗಿದೆ. ಈ ಖುಷಿಯ ಸುದ್ದಿಯನ್ನು ಚಂದನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಸಮೇತ ಹಂಚಿಕೊಂಡಿದ್ದಾರೆ. ಆದರೆ ಈ ಮಗು ಎಂಥಾ ವಿಶೇಷ ದಿನ ಹುಟ್ಟಿದೆ ಗೊತ್ತಾ?

ಲಕ್ಷ್ಮೀ ಬಾರಮ್ಮಾ ಧಾರವಾಹಿಯಲ್ಲಿ ಜೋಡಿಯಾಗಿ ನಟಿಸಿದ್ದ ಚಂದನ್-ಕವಿತಾ ಬಳಿಕ ಉತ್ತಮ ಸ್ನೇಹಿತರಾಗಿ ಕೊನೆಗೆ ಇಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿತ್ತು. 2021 ರಲ್ಲಿ ಚಂದನ್ ಮತ್ತು ಕವಿತಾ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ಮುದ್ದು ಜೋಡಿಗೆ ಮುದ್ದಾದ ಮಗುವಿನ ಪೋಷಕರಾಗಿದ್ದಾರೆ.

ನನ್ನ ಪುಟ್ಟ ಕಂದಮ್ಮ ಧರೆಗಿಳಿದು ಬಂದಿದ್ದಾನೆ ಎಂದು ಮೆಸೇಜ್ ಬರೆದ ಚಂದನ್, ಮಗುವಿನ ಕಾಲುಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರ ಈ ವಿಡಿಯೋ ನೋಡಿ ಸಾಕಷ್ಟು ಜನ ಸೆಲೆಬ್ರಿಟಿಗಳು, ಅಭಿಮಾನಿಗಳು ಶುಭಾಶಯ ಸಂದೇಶ ಬರೆದಿದ್ದಾರೆ.

ಅಷ್ಟಕ್ಕೂ ಚಂದನ್ ಮತ್ತು ಕವಿತಾ ಮಗು ಎಷ್ಟು ವಿಶೇಷ ದಿನ ಹುಟ್ಟಿದ್ದಾನೆ ಗೊತ್ತಾ? ಸೆಪ್ಟೆಂಬರ್ 18 ರಂದು ಕವಿತಾ ಮಗನಿಗೆ ಜನ್ಮ ನೀಡಿದ್ದಾರೆ. ಇದೇ ದಿನ ವಿಷ್ಣುವರ್ಧನ್, ಉಪೇಂದ್ರ, ಶ್ರುತಿ ಅವರಂತಹ ದಿಗ್ಗಜ ಕಲಾವಿದರು ಜನಿಸಿದ್ದಾರೆ. ಇದೇ ವಿಶೇಷ ದಿನದಂದೇ ಕವಿತಾ ಕೂಡಾ ಮಗನಿಗೆ ಜನ್ಮ ನೀಡಿರುವುದು ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪ ಅಮ್ಮನ ಕಿಸ್ಸಿಂಗ್ ನೋಡಿ ಕಣ್ಣು ಮುಚ್ಚಿಕೊಂಡ ಪ್ರಿಯಾಂಕ ಮಗಳು ಮಾಲ್ತಿ ಮೇರಿ